alex Certify ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ SPB ಯವರ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ SPB ಯವರ ಈ ವಿಡಿಯೋ

SP Balasubrahmanyam Could Light up a Room With His Energy and This Old Photoshoot Video is Proof

16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಭಾವಪೂರ್ಣ ದನಿ ನೀಡಿ ದೇಶದ ಮನೆಮಾತಾಗಿದ್ದ ಸಂಗೀತ ಲೋಕದ ದಿಗ್ಗಜ ಎಸ್‌.ಪಿ. ಬಾಲಸುಬ್ರಹ್ಮಣ್ಯಂರ ಅಗಲಿಕೆ ಅವರ ಅಭಿಮಾನಿಗಳನ್ನು ಇನ್ನೂ ಸಹ ಬೇಸರದಲ್ಲಿ ಇರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಮೇರುಗಾಯಕನ ಸ್ಮರಣಾರ್ಥ ಅನೇಕ ವಿಡಿಯೋಗಳು ಹರಿದಾಡುತ್ತಿವೆ. ಅವುಗಳ ಪೈಕಿ, ಸ್ಟುಡಿಯೋವೊಂದರಲ್ಲಿ ತಮ್ಮ ಫೋಟೋ ಶೂಟ್ ನಡೆಯುತ್ತಿದ್ದ ವೇಳೆ ತಮ್ಮ ಮಗುವಿನಂಥ ಉತ್ಸಾಹದಿಂದ ಪೋಸ್ ನೀಡುತ್ತಿದ್ದ ಎಸ್‌ಪಿಬಿರನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ಸೂಟ್‌ಧಾರಿಯಾಗಿ, ಕೈಯಲ್ಲಿ ಮೈಕ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್‌ ನೀಡುತ್ತಿರುವ ಎಸ್‌ಪಿಬಿ ಆ ಫೋಟೋಶೂಟ್‌ ಸ್ಥಳದಲ್ಲಿ ಸೇರಿದ್ದ ಪ್ರತಿಯೊಬ್ಬರಲ್ಲೂ ಉತ್ಸಾಹ ತುಂಬಿಸುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

It's just a photoshoot but look how he keeps the surrounding filled with his charm ! ❤️

Posted by Vishwa Guna on Friday, September 25, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...