alex Certify ಬಾಕ್ಸ್ ಆಫೀಸ್ ಧೂಳೀಪಟ, ಹೊಸ ದಾಖಲೆ ಬರೆದ ‘RRR ‘ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕ್ಸ್ ಆಫೀಸ್ ಧೂಳೀಪಟ, ಹೊಸ ದಾಖಲೆ ಬರೆದ ‘RRR ‘

ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಆರ್‌.ಆರ್‌.ಆರ್.’ ಚಿತ್ರ ಬಾಕ್ಸ್ ಆಫೀಸ್‌ ಗಳಿಕೆಯಲ್ಲಿ ಗಗನಕ್ಕೇರಿದೆ.

ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಆರ್‌.ಆರ್‌.ಆರ್.’ ಮೊದಲ ದಿನ 236 -250 ಕೋಟಿ ರೂ. ಗಳಿಸಿದೆ. ಈಗ ದಿನದ 2 ​​ಡೇಟಾ ಲಭ್ಯವಿದ್ದು, ಚಿತ್ರವು ವಿಶ್ವಾದ್ಯಂತ 400 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿದೆ. ಭಾರತ ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಚಿತ್ರ ದಾಖಲೆ ಬರೆಯುತ್ತಿದೆ.

ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, AUS, NZ ನಲ್ಲಿ ‘ಆರ್‌.ಆರ್‌.ಆರ್.’ ಗಳಿಕೆಯಲ್ಲಿ ದಾಖಲೆ ಬರೆದಿದೆ. ಆಸ್ಟ್ರೇಲಿಯಾದಲ್ಲಿ ‘The Batman’ ಅನ್ನು ‘ಆರ್‌.ಆರ್‌.ಆರ್.’ ಹಿಂದಿಕ್ಕಿದೆ, ನ್ಯೂಜಿಲೆಂಡ್ ನಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ.

ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂನಲ್ಲಿ ಬಿಡುಗಡೆಯಾಗಿರುವ ‘ಆರ್‌.ಆರ್‌.ಆರ್.’ ವೀಕೆಂಡ್ ಗಳಿಕೆಯಲ್ಲಿಯೂ ದಾಖಲೆ ಬರೆದಿದ್ದು, ಮೂರನೇ ದಿನಲ್ಲಿ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಲಿದೆ ಎನ್ನಲಾಗಿದೆ.

ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಸರಿನ್ ಮೊದಲಾದವರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...