alex Certify ಬೆಳಗಿನ ಜಾವದಿಂದಲೇ ಶೋ ಆರಂಭ: ಡಿ ಬಾಸ್ ಅಭಿಮಾನಿಗಳಿಗೆ ಶಿವರಾತ್ರಿಯೊಂದಿಗೆ ‘ರಾಬರ್ಟ್’ ಹಬ್ಬದ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗಿನ ಜಾವದಿಂದಲೇ ಶೋ ಆರಂಭ: ಡಿ ಬಾಸ್ ಅಭಿಮಾನಿಗಳಿಗೆ ಶಿವರಾತ್ರಿಯೊಂದಿಗೆ ‘ರಾಬರ್ಟ್’ ಹಬ್ಬದ ಸಂಭ್ರಮ

ಬೆಂಗಳೂರು: ರಾಜ್ಯದೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಡಿ ಬಾಸ್ ಅಭಿಮಾನಿಗಳ ಸಂಭ್ರಮ ಇಮ್ಮಡಿಸಿದೆ.

ಶಿವರಾತ್ರಿ ವಿಶೇಷವಾಗಿ ದರ್ಶನ್ ಅಭಿನಯದ ‘ರಾಬರ್ಟ್’ ಬಿಡುಗಡೆಯಾಗಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮೊದಲ ದಿನ 1596 ಚಿತ್ರಮಂದಿರಗಳಲ್ಲಿ 3889 ಶೋಗಳು ನಡೆಯಲಿವೆ. ಮೊದಲ ದಿನವೇ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳ ಸಂಭ್ರಮವಂತೂ ಮುಗಿಲುಮುಟ್ಟಿದೆ. ಕೆಲವಡೆ ಬೆಳಗಿನ ಜಾವದಿಂದಲೇ ಚಿತ್ರಪ್ರದರ್ಶನ ಆರಂಭವಾಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ನಿರಂತರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿಯೂ ‘ರಾಬರ್ಟ್’ ಹವಾ ಜೋರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...