alex Certify ‘ಆಸ್ಪತ್ರೆಯಲ್ಲಿ ನನ್ನ ತಾಯಿಯ ಕ್ಯಾಟ್​ವಾಕ್​’: ಹೃದಯಸ್ಪರ್ಶಿ ವಿಡಿಯೋ ಶೇರ್​ ಮಾಡಿದ ರಾಖಿ ಸಾವಂತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಸ್ಪತ್ರೆಯಲ್ಲಿ ನನ್ನ ತಾಯಿಯ ಕ್ಯಾಟ್​ವಾಕ್​’: ಹೃದಯಸ್ಪರ್ಶಿ ವಿಡಿಯೋ ಶೇರ್​ ಮಾಡಿದ ರಾಖಿ ಸಾವಂತ್​

ಬಾಲಿವುಡ್ ನಟಿ ರಾಖಿ ಸಾವಂತ್​ ಬಿಗ್​ಬಾಸ್​ ಸೀಸನ್​ನಲ್ಲಿ ಭಾಗಿಯಾದ ಬಳಿಕ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಏಪ್ರಿಲ್ 19ನೇ ತಾರೀಖಿನಂದು ತಮ್ಮ ತಾಯಿ ಕ್ಯಾನ್ಸರ್​ನ ಸಂಬಂಧಿ ಸರ್ಜರಿಯೊಂದನ್ನ ಪೂರೈಸಿದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನ ನೀಡಿದ್ದರು, ಇದಾದ ಬಳಿಕ ಜಯಾ ಸಾವಂತ್​ ಮಾರಕ ಕಾಯಿಲೆಯಿಂದ ಕ್ರಮೇಣವಾಗಿ ಚೇತರಿಸಿಕೊಳ್ತಿದ್ದಾರೆ. ಇದೀಗ ತಮ್ಮ ತಾಯಿ ಆಸ್ಪತ್ರೆಯ ಕಾರಿಡಾರ್​ನಲ್ಲಿ ನಡೆಯಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋವನ್ನ ರಾಖಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿರುವ ರಾಖಿ, ಆಸ್ಪತ್ರೆಯಲ್ಲಿ ಅಮ್ಮನ ಮಾರ್ಜಾಲ ನಡಿಗೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ರಾಖಿ ಫ್ಯಾನ್ಸ್ ಕಮೆಂಟ್​ ವಿಭಾಗದಲ್ಲಿ ಜಯಾ ಸಾವಂತ್​ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಬಿಗ್​ಬಾಸ್​ ಸೀಸನ್ 14 ಖ್ಯಾತಿಯ ರಾಖಿ ಸಾವಂತ್​ ತಮ್ಮ ತಾಯಿಯ ಶಸ್ತ್ರಚಿಕಿತ್ಸೆಯ ಬಳಿಕ ಸಲ್ಮಾನ್​ ಖಾನ್​ ಹಾಗೂ ಸೊಹೇಲ್​ ಖಾನ್​ಗೆ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ಅರ್ಪಿಸಿದ್ದರು. ನನ್ನ ತಾಯಿಯನ್ನ ಬಚಾವ್​ ಮಾಡಿದ ಸಲ್ಮಾನ್​ ಹಾಗೂ ಸೊಹೇಲ್​ ಸಹೋದರರಿಗೆ ಧನ್ಯವಾದ ಎಂದು ಹೇಳಿದ್ದರು.

ನಾನು ಸಲ್ಮಾನ್​ ಖಾನ್​ರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಹಣವಿಲ್ಲದೇ ಜೀವನ ಸಾಗಿಸೋದು ಹೇಗೆ..? ನಾನು ಹೀಗೆ ಸತ್ತು ಹೋಗ್ತೇನಾ ಅಂತೆಲ್ಲ ಜೀಸಸ್​​ ಬಳಿ ಕೇಳ್ತಿದ್ದೆ. ಆದರೆ ಜೀಸಸ್​​ ಏಂಜಲ್​ನ ರೀತಿಯಲ್ಲಿ ಸಲ್ಮಾನ್​ ಖಾನ್​​ರನ್ನ ನಮ್ಮ ಜೀವನದಲ್ಲಿ ಕಳುಹಿಸಿಕೊಟ್ಟಿದ್ದಾರೆ. ನನ್ನ ಪರ ನಿಂತಿರುವ ಸಲ್ಮಾನ್​ ಖಾನ್​ ನನ್ನ ಆಪರೇಷನ್​​ ಮಾಡಿಸುತ್ತಿದ್ದಾರೆ ಎಂದು ರಾಖಿ ಸಾವಂತ್​ ತಾಯಿ ಜಯಾ ಸಾವಂತ್​ ಕೂಡ ಹೇಳಿದ್ದರು.

ಬಿಗ್​ಬಾಸ್​ ಮನೆಯಲ್ಲಿ ಇದ್ದಾಗಲೇ ರಾಖಿ ಸಾವಂತ್​ ತಮ್ಮ ತಾಯಿಯ ವೈದ್ಯಕೀಯ ಸವಾಲುಗಳ ಬಗ್ಗೆ ಮಾತನಾಡಿದ್ದರು. ರಾಖಿ ಸಾವಂತ್​ ಬಿಗ್​ಬಾಸ್​ ಸೀಸನ್​​ನಿಂದ 14 ಲಕ್ಷ ರೂ. ಪಡೆದಿದ್ದಾರೆ. ಈ ಹಣವನ್ನ ತಾಯಿಯ ಚಿಕಿತ್ಸೆಗೆ ಖರ್ಚು ಮಾಡೋದಾಗಿ ರಾಖಿ ಹೇಳಿಕೊಂಡಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...