alex Certify BIG BREAKING: ಭೀಕರ ಕಾರ್ ಅಪಘಾತದಲ್ಲಿ ಖ್ಯಾತ ಗಾಯಕ ಸಾವು, ಸಿಂಗರ್ ನಿರ್ವೈರ್ ಸಿಂಗ್ ನಿಧನಕ್ಕೆ ಸ್ನೇಹಿತರ ಕಂಬನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಭೀಕರ ಕಾರ್ ಅಪಘಾತದಲ್ಲಿ ಖ್ಯಾತ ಗಾಯಕ ಸಾವು, ಸಿಂಗರ್ ನಿರ್ವೈರ್ ಸಿಂಗ್ ನಿಧನಕ್ಕೆ ಸ್ನೇಹಿತರ ಕಂಬನಿ

ನವದೆಹಲಿ: ‘ಮೈ ಟರ್ನ್’ ಆಲ್ಬಂನ ‘ತೇರೆ ಬಿನಾ…’ಗೆ ಹೆಸರುವಾಸಿಯಾಗಿದ್ದ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಗಾಯಕ ನಿರ್ವೈರ್ ಸಿಂಗ್ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ನಿರ್ವೈರ್ ತನ್ನ ಲೇನ್‌ ನಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರ್ ನಿಯಂತ್ರಣ ಕಳೆದುಕೊಂಡು ಇವರು ಸಾಗುತ್ತಿದ್ದ ಲೇನ್ ಗೆ ಪಲ್ಟಿಯಾಗಿ ಜೀಪ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿರ್ವೈರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಡಿಗ್ಗರ್ಸ್ ರೆಸ್ಟ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆಯುವ ಮೊದಲು ಆ ಪ್ರದೇಶದಲ್ಲಿ ಕಾರ್ ಅತಿವೇಗವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಅಪಘಾತಕ್ಕೆ ಕಾರಣರಾದ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ. ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಕಾರಣದ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ.

ನಿರ್ವೈರ್ ಅವರ ಸಾವು ಮೆಲ್ಬೋರ್ನ್‌ನ ಭಾರತೀಯ ಸಮುದಾಯವನ್ನು ಆಘಾತಗೊಳಿಸಿದೆ. ಸ್ನೇಹಿತರಿಂದ ಶ್ರದ್ಧಾಂಜಲಿಗಳ ಮಹಾಪೂರಕ್ಕೆ ಕಾರಣವಾಗಿದೆ. ‘ಮೈ ಟರ್ನ್’ ಆಲ್ಬಂನ ‘ತೇರೆ ಬಿನಾ’ ಹಾಡಿನೊಂದಿಗೆ ಅವರು ಖ್ಯಾತಿ ಗಳಿಸಿದರು. ‘ಜೆ ರುಸ್ಗಿ’, ‘ಫೆರಾರಿ ಡ್ರೀಮ್’ ಮತ್ತು ‘ಹಿಕ್ ಥೋಕ್ ಕೆ’ ಗೀತೆಗಳು ಕೂಡ ಹೆಸರಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...