alex Certify ಪುತ್ರನೊಂದಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ ಪ್ರಿಯದರ್ಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನೊಂದಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ ಪ್ರಿಯದರ್ಶನ್

ಮಲಯಾಳಂ ಚಿತ್ರೋದ್ಯಮದ ಭಾರೀ ಸಂತಸಕ್ಕೆ ಕಾರಣವಾಗಿರುವ ಮರಕ್ಕರ್‌:ಅರಬಿಕಂಡಲೈಟ್ ಸಿಂಹಮ್, ಪ್ರಿಯದರ್ಶನ್‌ರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ.

ಮೋಹನ್‌ಲಾಲ್ ಪ್ರಧಾನ ಭೂಮಿಕೆ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ’ಅತ್ಯುತ್ತಮ ಫೀಚರ್‌ ಚಿತ್ರ’ ಗೌರವ ಸಿಕ್ಕಿದೆ. ಕಾಸ್ಟ್ಯೂಮ್ ಹಾಗೂ ವಿಶೇಷ ಎಫೆಕ್ಟ್‌ಗಳಿಗೂ ಸಹ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ.

2007ರಲ್ಲಿ ತಮಿಳು ಚಿತ್ರ ’ಕಾಂಚೀವರಂ’ಗೆ ಅತ್ಯುತ್ತಮ ಫೀಚರ್‌ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದ್ದ ಈ ಹಿರಿಯ ನಿರ್ದೇಶಕನಿಗೆ ಇದು ಮತ್ತೊಂದು ಪ್ರಶಸ್ತಿಯಾಗಿದೆ.

“ಈ ಬಾರಿ ನನ್ನದೇ ಭಾಷೆಯ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದು ಇನ್ನೂ ಹೆಚ್ಚು ಸಂತಸಕ್ಕೆ ಕಾರಣವಾಗಿದೆ. ’ಕಾಂಚೀವರಂ’ ಒಂದು ವಾಸ್ತವಾಧರಿತ ಚಿತ್ರ ಹಾಗೂ ನಾನು ಒಬ್ಬ ವಾಣಿಜ್ಯ ಚಿತ್ರ ನಿರ್ದೇಶಕ. ಇದು ಕಮರ್ಷಿಯಲ್ ಚಿತ್ರಕ್ಕೊಂದು ದೊಡ್ಡ ಪ್ರೋತ್ಸಾಹದ ಹೆಜ್ಜೆಯಾಗಿತ್ತು. ಸಾಮಾನ್ಯವಾಗಿ ಇಂಥ ಚಿತ್ರಗಳಿಗೆ ಈ ರೀತಿಯ ಮನ್ನಣೆ ಸಿಕ್ಕಿ, ಇಷ್ಟು ದೊಡ್ಡ ಪ್ರಶಸ್ತಿ ಸಿಗುವುದಿಲ್ಲ” ಎಂದು ಪ್ರಿಯದರ್ಶನ್ ತಿಳಿಸಿದ್ದಾರೆ.

ಯುವತಿ ಧರಿಸಿದ ಉಡುಪು ಸರಿಯಿಲ್ಲ ಅಂತಾ ಪೊಲೀಸರಿಗೆ ಕರೆ ಮಾಡಿದ ನೆರೆಮನೆಯಾಕೆ..!

“ಚಿಕ್ಕ ಉದ್ಯಮವಾದ ನಮ್ಮದು ಬಾಲಿವುಡ್‌ ಚಿತ್ರಗಳೊಂದಿಗೆ ಸ್ಫರ್ಧಿಸುತ್ತಿದ್ದು, ಈ ಚಿತ್ರ ನಿರ್ಮಾಣಕ್ಕೆ ದುಡ್ಡು ಹಾಕಿರುವ ಪರಿಯನ್ನು ಪ್ರಶಂಸಿಸುತ್ತೇನೆ. ಈ ಚಿತ್ರವು ಮೋಹನ್‌ಲಾಲ್‌ ಹಾಗೂ ನನ್ನ 13 ವರ್ಷಗಳ ದೊಡ್ಡ ಕನಸಾಗಿತ್ತು. ಈ ಚಿತ್ರವು ಮಲಯಾಳಂ, ತಮಿಳುಗಳಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು ಹಾಗೂ ಕನ್ನಡದಲ್ಲೂ ಬರುತ್ತಿದೆ” ಎಂದಿದ್ದಾರೆ ಪ್ರಿಯದರ್ಶನ್.

ಚಿತ್ರದಲ್ಲಿ ಪ್ರಿಯದರ್ಶನ್‌ನ ಮಗಳಾದ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಪುತ್ರ ಸಿದ್ಧಾರ್ಥ್ ಪ್ರಿಯದರ್ಶನ್ ನಟಿಸಿದ್ದಾರೆ. ಸಿದ್ಧಾರ್ಥ್ ವಿಶೇಷ ಎಫೆಕ್ಟ್‌ಗಳಿಗೆ ಪ್ರಶಸ್ತಿ ಜಯಿಸಿದ್ದಾರೆ.

“ನನ್ನ ಮಗ ಹಾಗೂ ನಾನು ಒಂದೇ ಬಾರಿಗೆ ರಾಷ್ಟ್ರಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆಗೈದ ಮೊದಲ ಅಪ್ಪ-ಮಗ ಜೋಡಿಯೆಂಬ ಇತಿಹಾಸ ನಿರ್ಮಿಸಿದ್ದೇವೆ” ಎಂದು ಪ್ರಿಯದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...