alex Certify ಯುವತಿ ಧರಿಸಿದ ಉಡುಪು ಸರಿಯಿಲ್ಲ ಅಂತಾ ಪೊಲೀಸರಿಗೆ ಕರೆ ಮಾಡಿದ ನೆರೆಮನೆಯಾಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಧರಿಸಿದ ಉಡುಪು ಸರಿಯಿಲ್ಲ ಅಂತಾ ಪೊಲೀಸರಿಗೆ ಕರೆ ಮಾಡಿದ ನೆರೆಮನೆಯಾಕೆ..!

ಟಿಕ್​ಟಾಕ್​​ನಲ್ಲಿ ಪೋಸ್ಟ್ ಆಗುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳು ವೈರಲ್​ ಆಗುತ್ತವೆ. ಇಂತಹದ್ದೇ ಒಂದು ವೈರಲ್​ ವಿಡಿಯೋದಲ್ಲಿ ಟಿಕ್​ಟಾಕರ್​ ಯುವತಿಯೊಬ್ಬಳು ನಾನು ಧರಿಸುವ ಉಡುಪಿನ ಕಾರಣದಿಂದಾಗಿ ನನ್ನ ನೆರೆಮನೆಯವರು ಪೊಲೀಸರನ್ನ ಕರೆಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಅಮೆರಿಕದ ಲಾಸ್​ ಎಂಜಲಿಸ್​​​ನ ರೋವಿ ವೇಡ್​ ಎಂಬಾಕೆ ಮನೆಯ ಹೊರಗಡೆ ಟಿಕ್​ಟಾಕ್ ವಿಡಿಯೋ ಮಾಡುತ್ತಿದ್ದಳು. ಇದನ್ನ ನೋಡಿದ ನೆರೆ ಮನೆಯವರು ಈ ರೀತಿಯ ಅಸಂಬದ್ಧ ಉಡುಪನ್ನ ಧರಿಸಿ ಬೀದಿಯಲ್ಲಿ ನೃತ್ಯ ಮಾಡೋದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರೋವಿ ಸೌಜನ್ಯದಿಂದ ನನಗೆ ಸಾರ್ವಜನಿಕ ಸ್ವತ್ತುಗಳನ್ನ ಬಳಸೋಕೆ ಅಧಿಕಾರ ಇದೆ ಎಂದು ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಈ ಮಹಿಳೆ ಬಳಿ ಇದೆ 17 ವರ್ಷ ಹಿಂದಿನ ಮೆಕ್​ಡೊನಾಲ್ಡ್​ ಬರ್ಗರ್….!

ಮನೆಯ ಹೊರಗಡೆ ಪೊಲೀಸರು ಬಂದಿದ್ದನ್ನ ಕಂಡ ರೋವಿ, ತನ್ನ ಹಾಗೂ ಪೊಲೀಸರ ನಡುವೆ ನಡೆದ ಸಂಭಾಷಣೆಯನ್ನ ರೆಕಾರ್ಡ್ ಮಾಡಿದ್ದು ಅದನ್ನ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋ ಬರೋಬ್ಬರಿ 11 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...