alex Certify ಸುರಿಯುವ ಮಳೆಯಲ್ಲಿ ಪುಟ್ಟ ಹುಡುಗನಿಂದ ಬ್ಯಾಲೆ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಿಯುವ ಮಳೆಯಲ್ಲಿ ಪುಟ್ಟ ಹುಡುಗನಿಂದ ಬ್ಯಾಲೆ ನೃತ್ಯ

ನೈಜೀರಿಯಾದ 11 ವರ್ಷದ ಹುಡುಗನೊಬ್ಬ ಬರಿಗಾಲಿನಲ್ಲಿ ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಆಂತೋಣಿ ಮೆಸೋಮಾ ಹೆಸರಿನ ಈ ಹುಡುಗ ತನ್ನ ನೃತ್ಯದ ಹೆಜ್ಜೆಗಳ ಮೂಲಕ ಲಕ್ಷಾಂತರ ಮಂದಿಯ ಮೆಚ್ಚುಗೆ ಗಿಟ್ಟಿಸಿದ್ದಾನೆ.

ಇಲ್ಲಿನ ನೃತ್ಯ ಅಕಾಡೆಮಿಯೊಂದರ ಮುಂದೆ ಈ ಹುಡುಗ, ರೈಲುಗಳು ಓಡಾಡುವ ಜಾಗದಲ್ಲಿ ಬರಿಗಾಲಿನ ಬ್ಯಾಲೆ ನೃತ್ಯ ಮಾಡುತ್ತಾ ವೈರಲ್ ಆಗಿದ್ದಾನೆ. ಈ ವಿಡಿಯೋವನ್ನು 3.2 ಲಕ್ಷ ಬಾರಿ ವೀಕ್ಷಿಸಲಾಗಿತ್ತು.

ಅಮೆರಿಕದ Ballet Beyond Bordersನ ಸ್ಕಾಲರ್‌ಶಿಪ್‌ ಗೆದ್ದಿರುವ ಈ ಹುಡುಗ ಮುಂದಿನ ವರ್ಷದಿಂದ ತರಬೇತಿ ಪಡೆಯಲಿದ್ದಾನೆ. ಇದರೊಂದಿಗೆ ಬೇಸಿಗೆಯಲ್ಲಿ ತರಬೇತಿ ಪಡೆದುಕೊಳ್ಳಲೆಂದು ಹುಡುಗನಿಗೆ ಇದೇ ಥಿಯೇಟರ್‌ ಅಂತರ್ಜಾಲದ ಸಂಪರ್ಕದ ವ್ಯವಸ್ಥೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...