alex Certify ಮದುವೆಯಾಗದೆ ಗರ್ಭಿಣಿಯಾಗಿದ್ದ ನಟಿಗೆ ಈ ಸಲಹೆ ನೀಡಿದ್ಲು ಗೆಳತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗದೆ ಗರ್ಭಿಣಿಯಾಗಿದ್ದ ನಟಿಗೆ ಈ ಸಲಹೆ ನೀಡಿದ್ಲು ಗೆಳತಿ

ತಮ್ಮ ಜೀವನದ ಅನೇಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡ ಬಾಲಿವುಡ್ ನಟಿ ನೀನಾ ಗುಪ್ತಾ, ತಮ್ಮ ಜೀವನಚರಿತ್ರೆ ’ಸಚಚ್‌ ಕಹೂನ್ ತೋ : ಮೇರಿ ಆತ್ಮಕಥಾ’ ಬರೆದುಕೊಂಡಿದ್ದಾರೆ.

ಮಗಳು ಮಸಾಬಾ ಗುಪ್ತಾಳ ಗರ್ಭಿಣಿಯಾಗಿದ್ದ ವೇಳೆ ತಾವು ಎದುರಿಸಿದ ಘಟನೆಯೊಂದರ ಬಗ್ಗೆ ನೀನಾ ಬರೆದುಕೊಂಡಿದ್ದಾರೆ. ವೆಸ್ಟ್‌ ಇಂಡೀಸ್‌ನ ಮಾಜಿ ಕ್ರಿಕೆಟರ್‌ ವಿವಿಯನ್ ರಿಚರ್ಡ್ಸ್ ಜೊತೆಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನೀನಾಗೆ ಮುಂಬೈ ಬಾಂದ್ರಾ ಪ್ರದೇಶದಲ್ಲಿದ್ದ ಸಲಿಂಗಿ ಬ್ಯಾಂಕರ್‌ ಒಬ್ಬರನ್ನು ಮದುವೆಯಾಗಲು ಆಕೆಯ ಗೆಳತಿಯೊಬ್ಬರು ಸೂಚಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಮತ್ತೆ ಸಿಎಂ ಆಗುವ ಅಭಿಲಾಷೆ ವ್ಯಕ್ತಪಡಿಸಿದ ಹೆಚ್.ಡಿ. ಕುಮಾರಸ್ವಾಮಿ

ಹುಟ್ಟುವ ಮಗು ತನ್ನದಾದರೂ, ವಿವಿಯನ್ ತನ್ನ ಜೀವನದ ಭಾಗವಾಗಿ ಇರುವುದಿಲ್ಲ ಎಂದು ಸಮಾಜದಲ್ಲಿ ಹೇಳಿಕೊಳ್ಳಲು ಕಷ್ಟವಾಗುವ ಕಾರಣ ಹೀಗೆ ಮಾಡಲು ಸಲಹೆಯನ್ನು ಕೇಳುತ್ತಲೇ, ವಿವಾದದಿಂದ ತಪ್ಪಿಸಿಕೊಳ್ಳಲು ಮದುವೆಯಾಗುವುದು ಸರಿಯಲ್ಲ ಎಂದು ಆ ಸಲಹೆಯನ್ನು ನಗುತ್ತಲೇ ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ ನೀನಾ.

ಬಿಜೆಪಿ ಸೇರುವಾಗ ಹೆಚ್​. ವಿಶ್ವನಾಥ್​​​ಗೆ​ ಬಿಎಸ್​ವೈ ವಯಸ್ಸು ಗೊತ್ತಿರಲಿಲ್ಲವೇ..? ಹೆಚ್​.ಡಿ.ಕೆ. ವ್ಯಂಗ್ಯ

ಇದೇ ವೇಳೆ, ಆ ಮಗು ತನ್ನದು ಎಂದು ಹೇಳಿಕೊಂಡು ತಮ್ಮನ್ನು ಮದುವೆಯಾಗಲು ಚಿತ್ರನಿರ್ಮಾಪಕ ಸತೀಶ್ ಕೌಶಿಕ್ ಮದುವೆಯ ಆಫರ್‌ ಕೊಟ್ಟಿದ್ದಾಗಿ ಸಹ ನೀನಾ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...