alex Certify ‘ಮಾಸ್ಕ್’ ಮಹತ್ವ ತಿಳಿಸಲು ಶಾರುಖ್ ಚಿತ್ರದ ಸೀನ್ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಾಸ್ಕ್’ ಮಹತ್ವ ತಿಳಿಸಲು ಶಾರುಖ್ ಚಿತ್ರದ ಸೀನ್ ಬಳಕೆ

ನಾಗಪುರ: ಸಿನೆಮಾಗಳ ಪ್ರಸಿದ್ಧ ಸನ್ನಿವೇಶಗಳ ಮಿಮ್ಸ್ ಗಳು ಈಗ ಇಂಟರ್ ನೆಟ್ ನಲ್ಲಿ ತುಂಬಿ ಹೋಗುತ್ತಿವೆ. ಹಲವು ನಗೆ ಉಕ್ಕಿಸುವಂತಿರುತ್ತವೆ.

ಇತ್ತೀಚೆಗೆ ಲಾಕ್‌ಡೌನ್, ಮಾಸ್ಕ್, ಸಾಮಾಜಿಕ ಅಂತರ ಮುಂತಾದ ವಿಷಯವಾಗಿ ಸಾಕಷ್ಟು ಮಿಮ್ಸ್ ಗಳು ಬಂದಿವೆ.
ಮುಂಬೈ ಪೊಲೀಸರು ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಮಾಡಿದ ಮಿಮ್ಸ್ ಇತ್ತೀಚೆಗೆ ಪ್ರಸಿದ್ಧವಾಗಿತ್ತು. ಈಗ ನಾಗಪುರ ಪೊಲೀಸರು ರಚಿಸಿ ಹರಿಬಿಟ್ಟ ಮಿಮ್ಸ್ ಜನಮೆಚ್ಚುಗೆ ಪಡೆದಿದೆ.

ಶಾರುಖ್ ಖಾನ್, ರಾಣಿ ಮುಖರ್ಜಿ, ಕಾಜೋಲ್ ಅಭಿನಯದ, ಕರಣ್ ಜೋಹರ್ ಅವರ ಪ್ರಸಿದ್ಧ ಸಿನೆಮಾ ಕುಚ್ ಕುಚ್ ಹೋತಾ ಹೈ ಚಿತ್ರದ ಸನ್ನಿವೇಶವನ್ನು ಕೋವಿಡ್ – 19 ಗೆ ಹೋಲಿಸಿ ಮಿಮ್ಸ್ ಮಾಡಲಾಗಿದೆ.‌

ಚಿತ್ರದಲ್ಲಿ ಶಾರುಖ್ ಕಾಜೋಲ್ ರನ್ನು ಅಪ್ಪಿಕೊಂಡು, ರಾಣಿ‌ ಮುಖರ್ಜಿ ಅವರ ಕೈ ಹಿಡಿದಿರುವ ಸನ್ನಿವೇಶವಿದೆ. ಶಾರುಖ್ ರಾಣಿಯನ್ನು ಇನ್ನೂ ಪ್ರೀತಿಸುತ್ತಿದ್ದಾರೆ. ಇಬ್ಬರ ಬಂಧ ಎಂದೂ ಮುರಿಯದು ಎಂಬ ಸಂದೇಶವನ್ನು ಆ ಸನ್ನಿವೇಶ ಸಾರುತ್ತದೆ.
ಅದನ್ನು ಮಿಮ್ಸ್ ಮಾಡಲಾಗಿದೆ.

ರಾಣಿ ಮುಖರ್ಜಿ ಅವರನ್ನು ಮಾಸ್ಕ್ ಎಂದು ಪರಿಗಣಿಸಲಾಗಿದೆ. ಶಾರುಖ್ ಅವರನ್ನು ಜನತೆಯ ರೀತಿ ಬಿಂಬಿಸಿದ್ದು, ಕಾಜೋಲ್ ಅವರನ್ನು (ಕೊರೊನಾ) ಹೊರ ಹೋಗುವುದರ ಪ್ರತೀಕವಾಗಿ ಬಳಸಿಕೊಳ್ಳಲಾಗಿದೆ.

“ಈ ಬಂಧವನ್ನು ಮುರಿಯಲು ಬಿಡಬೇಡಿ ಏಕೆಂದರೆ ಜೀವನದಲ್ಲಿ ತುಂಬಾ ಘಟಿಸುತ್ತದೆ” ಎಂದು
ಆ ಮಿಮ್ಸ್ ಜತೆ ಕೋಟ್ ಬರೆದ ನಾಗಪುರ ಪೊಲೀಸರು ಮಾಸ್ಕ್ ಧರಿಸಿ ಎಂಬ ಸಂದೇಶವನ್ನು ಟ್ವಿಟರ್ ಮೂಲಕ ನೀಡಿದ್ದಾರೆ. ಅದನ್ನು ಶಾರುಖ್ ಹಾಗೂ ಕಾಜೋಲ್ ಅವರಿಗೂ ಟ್ಯಾಗ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...