alex Certify ಬ್ರಾಂಡ್ ಮೌಲ್ಯದಲ್ಲಿ ಅಕ್ಷಯ್ ಕುಮಾರ್ ಮುಂದೆ, ನಂ.1 ಸ್ಥಾನದಲ್ಲಿ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾಂಡ್ ಮೌಲ್ಯದಲ್ಲಿ ಅಕ್ಷಯ್ ಕುಮಾರ್ ಮುಂದೆ, ನಂ.1 ಸ್ಥಾನದಲ್ಲಿ ಕೊಹ್ಲಿ

ಕಲಾವಿದರು ಸಿನಿಮಾ ವಿಷ್ಯದಲ್ಲಿ ಚರ್ಚೆಯಲ್ಲಿರುತ್ತಾರೆ. ಇದ್ರ ಜೊತೆ ಮಾರುಕಟ್ಟೆ ಬ್ರಾಂಡ್ ಮೌಲ್ಯದ ವಿಷ್ಯಕ್ಕೂ ಚರ್ಚೆಗೆ ಬರ್ತಾರೆ. ಈ ಬ್ರಾಂಡ್ ಮೌಲ್ಯ ಆಗಾಗ ಬದಲಾಗುತ್ತಿರುತ್ತದೆ. ಡಫ್ & ಫೆಲ್ಪ್ಸ್ ಹೊಸ ಸರ್ವೆಯೊಂದನ್ನು ಮಾಡಿದ್ದು, ಇದ್ರಲ್ಲಿ ಕಲಾವಿದರು, ಕ್ರಿಕೆಟ್ ತಾರೆಯರ ಬ್ರಾಂಡ್ ಮೌಲ್ಯವನ್ನು ಹೇಳಲಾಗಿದೆ.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 237 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿ ನಂತ್ರ ಉಳಿದ ಆರು ಸೆಲೆಬ್ರಿಟಿಗಳು ಬಾಲಿವುಡ್ ನವರು. ಈ ಪಟ್ಟಿಯಲ್ಲಿ ಖಿಲಾಡಿ ಅಕ್ಷಯ್ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಬ್ರಾಂಡ್ ಮೌಲ್ಯ 118.9 ಮಿಲಿಯನ್ ಡಾಲರ್.

ಮೂರನೇ ಸ್ಥಾನದಲ್ಲಿ ರಣವೀರ್ ಸಿಂಗ್ ಹೆಸರಿದೆ. ರಣವೀರ್ ಬ್ರಾಂಡ್ ಮೌಲ್ಯ 102.9 ಮಿಲಿಯನ್ ಡಾಲರ್. ನಾಲ್ಕನೇ ಸ್ಥಾನದಲ್ಲಿ ಶಾರುಕ್ ಖಾನ್ ಹೆಸರಿದೆ. ಶಾರುಕ್ ಬ್ರಾಂಡ್ ಮೌಲ್ಯ 51.1 ಮಿಲಿಯನ್ ಡಾಲರ್. ನಟಿ ದೀಪಿಕಾ ಪಡುಕೋಣೆ ಕೂಡ ಸ್ಥಾನ ಪಡೆದಿದ್ದು, ಅವ್ರ ಬ್ರಾಂಡ್ ಮೌಲ್ಯ 50.4 ಮಿಲಿಯನ್ ಡಾಲರ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...