ಹೆಸರಾಂತ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಇದೀಗ ತನ್ನ 12ನೆ ಆವೃತ್ತಿಯನ್ನ ನಡೆಸುತ್ತಿದೆ. ಆದರೆ ಈ ಬಾರಿಯ ಶೋನಲ್ಲಿ ಪ್ರೇಕ್ಷಕರು ಹಿಂದೆಂದೂ ನೋಡಿರದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.
ಬಿಗ್ ಬಿಯೊಂದಿಗೆ ಶೋನಲ್ಲಿ ಕುಳಿತಿದ್ದ ಸ್ಪರ್ಧಿ ರಾಜ್ ಲಕ್ಷ್ಮೀ 12,50,000 ರೂ.ಗೆ ಆಟವನ್ನ ಸ್ಟಾಪ್ ಮಾಡಿದ್ದಾರೆ. ಅವರಿಗೆ ಚೆಕ್ ನೀಡಿ ಶೋದಿಂದ ವಿದಾಯ ಹೇಳಿದ ಅಮಿತಾಬ್ ಮತ್ತೊಬ್ಬ ಸ್ಪರ್ಧಿ ಸ್ವಪ್ನಿಲ್ ಎಂಬವರನ್ನ ವೇದಿಕೆಗೆ ಆಹ್ವಾನಿಸಿದ್ರು.
ಬಿಗ್ ಬಿ ಕೇಳಿದ ಮೊದಲ ಪ್ರಶ್ನೆಗೆ ಉತ್ತರಿಸಿದ ಸ್ವಪ್ನಿಲ್ ಎರಡನೇ ಪ್ರಶ್ನೆಗೆ ಉತ್ತರಿಸೋಕೆ ರೆಡಿಯಾಗಿದ್ರು. ಆದರೆ ಈ ವೇಳೆಗೆ ಬಿಗ್ ಬಿ ಅವರ ಕಂಪ್ಯೂಟರ್ 10 ಸೆಕೆಂಡ್ಗಳ ಕಾಲ ಕೆಲಸ ಮಾಡೋದನ್ನೇ ನಿಲ್ಲಿಸಿಬಿಟ್ಟಿದೆ. ಇದನ್ನ ನೋಡಿದ ಅಮಿತಾಬ್ ಕೂಡ ಶಾಕ್ ಆಗಿದ್ದಾರೆ. ಅಯ್ಯೋ ಕಂಪ್ಯೂಟರ್ ಹಾಳಾಯ್ತು ಎಂದ ಬಿಗ್ ಬಿ ಸಹಾಯಕ್ಕಾಗಿ ಟೀಂ ಸದಸ್ಯರನ್ನ ಕರೆದಿದ್ದಾರೆ. ಆದರೆ ಯಾರಾದರೂ ಸಹಾಯಕ್ಕೆ ಬರೋದಕ್ಕೂ ಮುನ್ನವೇ ಕಂಪ್ಯೂಟರ್ ಪುನಃ ಕಾರ್ಯ ನಿರ್ವಹಿಸೋಕೆ ಶುರು ಮಾಡಿದೆ.