alex Certify ಸಾಯುವ ಕೊನೆ ಕ್ಷಣದಲ್ಲಿ ನಟ ಇರ್ಫಾನ್ ನೆನಪು ಮಾಡಿಕೊಂಡಿದ್ದು ಯಾರನ್ನ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಯುವ ಕೊನೆ ಕ್ಷಣದಲ್ಲಿ ನಟ ಇರ್ಫಾನ್ ನೆನಪು ಮಾಡಿಕೊಂಡಿದ್ದು ಯಾರನ್ನ ಗೊತ್ತಾ…?

ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ಇರ್ಫಾನ್ ಖಾನ್ ಬುಧವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 53 ವರ್ಷದ ಇರ್ಫಾನ್ ಖಾನ್ ಕ್ಯಾನ್ಸರ್ ಗೆದ್ದು ಬಂದಿದ್ದರು. ಕ್ಯಾನ್ಸರ್ ಚಿಕಿತ್ಸೆ ನಂತ್ರ ಸಿನಿಮಾದಲ್ಲಿ ನಟಿಸಿದ್ದ ಇರ್ಫಾನ್ ಮಂಗಳವಾರ ಹೊಟ್ಟೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಕೆಲ ದಿನಗಳ ಹಿಂದಷ್ಟೆ ಇರ್ಫಾನ್ ಪ್ರೀತಿಯ ತಾಯಿಯನ್ನು ಕಳೆದುಕೊಂಡಿದ್ದಾರೆ. ತಾಯಿ ಸಾವಿನ ನಂತ್ರ ಇರ್ಫಾನ್ ನೊಂದಿದ್ದರು ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಕೂಡ ಇರ್ಫಾನ್ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ 95 ವರ್ಷದ ತಾಯಿ ನಿಧನರಾಗಿದ್ದರು. ಆದ್ರೆ ತಾಯಿಯ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಇರ್ಫಾನ್ ಗೆ ಆಗಿರಲಿಲ್ಲ. ವಿಡಿಯೋ ಮೂಲಕ ಅಂತ್ಯಸಂಸ್ಕಾರ ವೀಕ್ಷಿಸಿದ್ದರು. ಈ ನೋವು ಅವ್ರನ್ನು ಕಾಡುತ್ತಿತ್ತು.

ಇದೇ ದುಃಖದಲ್ಲಿ ಇರ್ಫಾನ್ ವಿದಾಯ ಹೇಳಿದ್ದಾರೆ. ಕೊನೆ ಕ್ಷಣದಲ್ಲಿ ತಾಯಿಯನ್ನು ನೆನಪಿಸಿಕೊಂಡ ಅವರು, ತಾಯಿ ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ಹೇಳಿದ್ದರಂತೆ. ಇದನ್ನು ಕೇಳಿದ ಪತ್ನಿ ಅತ್ತಿದ್ದರಂತೆ. ಆದ್ರೆ ಇರ್ಫಾನ್ ಈ ಕೊನೆ ಮಾತಿನ ಮೂಲಕ ಕೊನೆಯುಸಿರೆಳೆದಿದ್ದಾರೆ.

ಮನಸ್ಸಿನಲ್ಲಿ ನೋವಿದೆ. ಆದ್ರೆ ಮುಖದ ಮೇಲೆ ನಗುವಿದೆ ಎಂದು ಇರ್ಫಾನ್ ಕೊನೆಯದಾಗಿ ಟ್ವೀಟ್ ಮಾಡಿದ್ದರು. ಇರ್ಫಾನ್ ಅಂತ್ಯಕ್ರಿಯೆಯಲ್ಲಿ ಕೇವಲ 20 ಮಂದಿ ಪಾಲ್ಗೊಂಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...