alex Certify ಹೊಸ ವರ್ಷಕ್ಕೆ ಹೊಸ ಕೊಡುಗೆ: ಸಿನಿಮಾ ಟಿಕೆಟ್ ಫ್ರೀ -ಸೈನಿಕರಿಗೆ ಬಿಹಾರ ಟಾಕೀಸ್ ನಲ್ಲಿ ಹೀಗೊಂದು ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಹೊಸ ಕೊಡುಗೆ: ಸಿನಿಮಾ ಟಿಕೆಟ್ ಫ್ರೀ -ಸೈನಿಕರಿಗೆ ಬಿಹಾರ ಟಾಕೀಸ್ ನಲ್ಲಿ ಹೀಗೊಂದು ಗೌರವ

ಪಾಟ್ನಾ: ದೇಶದಲ್ಲೇ ಮೊದಲ ಬಾರಿಗೆ ಬಿಹಾರದ ಸಿನಿಮಾ ಮಂದಿರವೊಂದರಲ್ಲಿ ಸೈನಿಕರಿಗೆ ಜೀವನ ಪರ್ಯಂತ ಸಿನಿಮಾ ಟಿಕೆಟ್ ಉಚಿತವಾಗಿ ನೀಡಲಾಗುವುದು.

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಮತ್ತು ನಿವೃತ್ತ ಯೋಧರಿಗೆ ಆಜೀವಪರ್ಯಂತ ಉಚಿತವಾಗಿ ಸಿನಿಮಾ ಟಿಕೆಟ್ ನೀಡಲು ಪಾಟ್ನಾ ಮೂಲದ ಸಿನಿಮಾ ರೀಜೆಂಟ್ ಫನ್ ಸಿನಿಮಾ ಥಿಯೇಟರ್ ಮುಂದಾಗಿದೆ.

ಜನವರಿ 1 ರಿಂದ ವಾಯುಸೇನೆ, ನೌಕಾದಳ, ಭೂಸೇನೆ ಯೋಧರು ಉಚಿತವಾಗಿ ಸಿನಿಮಾ ವೀಕ್ಷಿಸಬಹುದು. ಸೈನಿಕರು ಗುರುತಿನ ಚೀಟಿ ತೋರಿಸಿ ಉಚಿತವಾಗಿ ಸಿನಿಮಾ ಟಿಕೆಟ್ ಪಡೆಯಬಹುದು ಎಂದು ಸಿನಿಮಾ ಥಿಯೇಟರ್ ಮಾಲೀಕ ಸುಮನ್ ಕೆ. ಸಿನ್ಹಾ ತಿಳಿಸಿದ್ದು, ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...