alex Certify ಅಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲಕನ ಡ್ರಮ್‌ ಕೌಶಲ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲಕನ ಡ್ರಮ್‌ ಕೌಶಲ್ಯ

ಆರು ವರ್ಷದ ಈ ಚತುರಮತಿ ಪೋರನಿಗೆ ಕೈಗೆರಡು ಕೋಲು, ಬಡಿಯಲೊಂದು ವಸ್ತು ಸಿಕ್ಕಿಬಿಟ್ಟರೆ ಸಾಕು, ಕಲಾತ್ಮಕ ವಾದ್ಯವನ್ನೇ ಮೂಡಿಸಿಬಿಡುತ್ತಾನೆ. ಅಭಿಷೇಕ್ ಕಿಚ್ಚು ಹೆಸರಿನ ಈ ಹುಡುಗ ತನ್ನ ಡ್ರಮ್ಮಿಂಗ್ ಕೌಶಲ್ಯದಿಂದ ನೆಟ್ಟಿಗರ ಮನಸೆಳೆಯುತ್ತಿದ್ದಾನೆ.

ಕೇರಳದ ಮಲಪ್ಪುರಂನ ನಿವಾಸಿಯಾದ ಅಭಿಷೇಕ್‌ ತನ್ನ ಡ್ರಮ್ಮಿಂಗ್ ಕೌಶಲ್ಯವನ್ನು ಒರೆಗೆ ಹಚ್ಚುತ್ತಿರುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.

ಕಾವೇರಿ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಈ ಪೋಸ್ಟ್ ಹಾಕಿದ್ದು, “ಆತನಲ್ಲಿ ಇವೆಲ್ಲಾ ಅಡಗಿದೆ…!” ಎಂದಿದ್ದು, “ಹುಟ್ಟಿನಿಂದಲೇ ಬಂದಿದ್ದನ್ನು ಗಂಟೆಗಟ್ಟಲೇ ಅಭ್ಯಾಸ ಮಾಡಿದರೂ ಸಹ ಕಲಿಯಲು ಸಾಧ್ಯವಿಲ್ಲ. ಈತನಿಗಿದು ಸ್ವಾಭಾವಿಕವಾಗಿ ಬಂದದ್ದು” ಎಂದು ಆತನ ಬಗ್ಗೆ ಒಂದು ಕಿರು ಪರಿಚಯ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...