alex Certify ಜಿಮ್ ನಲ್ಲಿ ವರ್ಕೌಟ್ ವೇಳೆ ಖ್ಯಾತ ನಟ ಜೂನಿಯರ್ NTR ಗೆ ಬೆರಳು ಮೂಳೆ ಮುರಿತ, ಮನೆಯಲ್ಲಿ ವಿಶ್ರಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್ ನಲ್ಲಿ ವರ್ಕೌಟ್ ವೇಳೆ ಖ್ಯಾತ ನಟ ಜೂನಿಯರ್ NTR ಗೆ ಬೆರಳು ಮೂಳೆ ಮುರಿತ, ಮನೆಯಲ್ಲಿ ವಿಶ್ರಾಂತಿ

ಹೈದರಾಬಾದ್: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕೈ ಬೆರಳಿನ ಮೂಳೆ ಮುರಿದುಕೊಂಡು ಖ್ಯಾತ ನಟ ಜೂನಿಯರ್ ಎನ್ಟಿಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕಳೆದ ವಾರ ಜೂನಿಯರ್ ಎನ್ಟಿಆರ್ ಅಂಕಲ್ ಬಾಲಯ್ಯ ಬಲ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ.

ಜೂನಿಯರ್ ಎನ್ಟಿಆರ್ ಜಿಮ್ ಮಾಡುವಾಗ ಕೈಬೆರಳಿನ ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಫೋಟೋವೊಂದನ್ನು ಜೂನಿಯರ್ ಎನ್ಟಿಆರ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೈಬೆರಳಿಗೆ ಬ್ಯಾಂಡೇಜ್ ಹಾಕಿದ್ದ ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದಾಗ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಬೆರಳು ಮೂಳೆ ಮುರಿದುಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಜೂನಿಯರ್ ಎನ್‌ಟಿಆರ್ ಅವರ ಬೆರಳಿಗೆ ಗಾಯವಾಗಿದೆ. ಅದಕ್ಕಾಗಿಯೇ ಅವರು ಆಸ್ಪತ್ರೆಯಲ್ಲಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ತಮ್ಮ ಹೈದರಾಬಾದ್ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...