alex Certify ನಾಳೆಯಿಂದ ‘ಯುವರತ್ನ’ ಎಂಟ್ರಿ, ಶುರುವಾಯ್ತು ಅಭಿಮಾನಿಗಳ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ‘ಯುವರತ್ನ’ ಎಂಟ್ರಿ, ಶುರುವಾಯ್ತು ಅಭಿಮಾನಿಗಳ ಸಂಭ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗಿತ್ತು. ಇದರಿಂದಾಗಿ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಏಪ್ರಿಲ್ 1 ರಿಂದ ಯುವರತ್ನ ಶುರುವಾಗಲಿದೆ. ವಿಜಯ ಕಿರಗಂದೂರು ನಿರ್ಮಾಣದಲ್ಲಿ, ಸಂತೋಷ್ ಆನಂದರಾಮ್ ನಿರ್ದೇಶಿಸಿರುವ ‘ಯುವರತ್ನ’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಇವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ರಾಜಕುಮಾರ’ ಸ್ಯಾಂಡಲ್ವುಡ್ನಲ್ಲಿ ದಾಖಲೆ ಬರೆದು ಭರ್ಜರಿ ಸಕ್ಸಸ್ ಕಂಡಿತ್ತು. ಅದೇ ರೀತಿ ‘ಯುವರತ್ನ’ ಕೂಡ ಭಾರಿ ನಿರೀಕ್ಷೆ ಮೂಡಿಸಿದೆ. ಸಿನಿಮಾ ಬಿಡುಗಡೆಯಾಗಲಿರುವ ಚಿತ್ರಮಂದಿರಗಳಲ್ಲಿ ಬ್ಯಾನರ್, ಕಟೌಟ್, ಫ್ಲೆಕ್ಸ್ ರಾರಾಜಿಸುತ್ತಿದ್ದು, ಅಭಿಮಾನಿಗಳು, ಸಿನಿರಸಿಕರು ಸಿನಿಮಾ ನೋಡಲು ಕಾತರಿಸುತ್ತಿದ್ದಾರೆ. ಬೆಳಗಿನ ಜಾವದಿಂದಲೇ ಫ್ಯಾನ್ಸ್ ಶೋ ಶುರುವಾಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...