alex Certify ʼಗೋಲ್​ ಮಾಲ್​ 3ʼ ಸಿನಿಮಾಗೆ 10 ವರ್ಷದ ಸಂಭ್ರಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೋಲ್​ ಮಾಲ್​ 3ʼ ಸಿನಿಮಾಗೆ 10 ವರ್ಷದ ಸಂಭ್ರಮ…!

ಬಾಲಿವುಡ್​ನ ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ ಆಕ್ಷನ್​ ಕಟ್​ ಹೇಳಿದ ಗೋಲ್​ ಮಾಲ್​ ಸಿನಿಮಾಗಳು ಅಭಿಮಾನಿಗಳಿಗೆ ನಗೆಯ ಭೂರಿ ಭೋಜನವನ್ನೇ ಉಣಬಡಿಸಿದ್ದವು. ಗೋಲ್​ಮಾಲ್​ ಸರಣಿಯ ಮೂರನೇ ಚಿತ್ರ ಇದೀಗ 10 ವರ್ಷ ಪೂರ್ತಿಗೊಳಿಸಿದೆ. 2010ರ ದೀಪಾವಳಿ ಸಂದರ್ಭದಲ್ಲಿ ಈ ಚಿತ್ರವನ್ನ ಬಿಡುಗಡೆ ಮಾಡಲಾಗಿತ್ತು.

ಅಜಯ್​ ದೇವಗನ್​, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಕುನಾಲ್, ಶ್ರೇಯಾಸ್ ತಲ್ಪಡೆ ಮತ್ತು ಕರೀನಾ ಕಪೂರ್ ಖಾನ್ ಚಿತ್ರದ ಮುಖ್ಯ ಪಾತ್ರಗಳನ್ನ ವಹಿಸಿದ್ದರು. ಇದೀಗ ಈ ಚಿತ್ರಕ್ಕೆ 10 ವರ್ಷ ತುಂಬಿದ ಸಂದರ್ಭದಲ್ಲಿ ನಟ ಕುನಾಲ್ ಶೂಟಿಂಗ್​ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ನಾವು ಗೋವಾಗೆ ಮಸ್ತಿ ಮಾಡೋಕೆ ತೆರಳೋದ್ರ ಬದಲು ಕೆಲಸಕ್ಕೆ ತೆರಳಿದ್ದೆವು ಅಂತಾ ಕ್ಯಾಪ್ಶನ್​ ಬರೆದು ನಕ್ಕಿದ್ದಾರೆ.

ʼಗೋಲ್ ​ಮಾಲ್​ 3ʼ ಬಳಿಕ 2017ರಲ್ಲಿ ರಿಲೀಸ್​ ಆದ ಗೋಲ್​ಮಾಲ್​ ಅಗೇನ್​ ಕೂಡ ಅಭಿಮಾನಿಗಳನ್ನ ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಗೋಲ್​ಮಾಲ್​ 5 ಸಂಭ್ರಮವನ್ನೂ ಕುನಾಲ್​ ಹಂಚಿಕೊಂಡಿದ್ದಾರೆ. ಪ್ರೇಕ್ಷಕರಷ್ಟೇ ನಾನೂ ಕೂಡ ಗೋಲ್​ ಮಾಲ್​ 5ಗೆ ಉತ್ಸುಕನಾಗಿದ್ದೇನೆ ಅಂತಾ ಸಂತಸ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...