alex Certify ಕೊರೊನಾದಿಂದ ಅಪ್ರತಿಮ ನಟ ಕಿಶೋರ್​ ನಂದ್ಲಾಸ್ಕರ್​​ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಅಪ್ರತಿಮ ನಟ ಕಿಶೋರ್​ ನಂದ್ಲಾಸ್ಕರ್​​ ಇನ್ನಿಲ್ಲ

ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಕಿಶೋರ್​ ನಂದ್ಲಾಸ್ಕರ್​​ ಇಂದು ಕೊನೆಯುಸಿರೆಳೆದಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿದ್ದ ಕಿಶೋರ್​​ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕಿಶೋರ್​ ಮರಾಠಿ ಸಿನಿಮಾಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಅದೇ ರೀತಿ ಜಿಸ್​​ ದೇಶ್​ ಮೆ ಗಂಗಾ ರೆಹ್ತಾ ಹೈ, ಖಾಕಿ, ವಾಸ್ತವ್, ಸಿಂಘಂನಂತಹ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಿಸ್​ ದೇಶ್​ ಮೇ ಗಂಗಾ ರೆಹ್ತಾ ಹೈ ಸಿನಿಮಾದಲ್ಲಿ ಕಿಶೋರ್​ ಜೊತೆ ನಟಿಸಿದ್ದ ಬಾಲಿವುಡ್​ ಹಿರಿಯ ನಟ ಗೋವಿಂದಾ ಕಿಶೋರ್​ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರತಿಭಾನ್ವಿತ ನಟನ ನಿಧನ ವಾರ್ತೆ ಕೇಳಿ ದುಃಖವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಟ ಸಂತಾಪ ಸೂಚಿಸಿದ್ರು.

ಪ್ರತಿಭಾನ್ವಿತ ಕೊರೊನಾದಿಂದಾ ಮೃತರಾದ ವಾರ್ತೆ ಕೇಳುತ್ತಿದ್ದಂತೆಯೇ ಬಾಲಿವುಡ್​ನ ತಾರೆಯರು ನಂದ್ಲಾಸ್ಕರ್​ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...