alex Certify ಡಾನ್ಸ್‌ ವಿಡಿಯೋಗಳಿಗೆ ದೇಸೀ ಟಚ್: ಮುಗಿಬಿದ್ದು ನೋಡಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್‌ ವಿಡಿಯೋಗಳಿಗೆ ದೇಸೀ ಟಚ್: ಮುಗಿಬಿದ್ದು ನೋಡಿದ ನೆಟ್ಟಿಗರು

Drake or 'Bole Chudiyan'? This Desi Instagrammer is Adding a Bollywood Twist to Viral Dance Videos

ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್ ಹಿಟ್ ಹಾಡುಗಳ ರೀಮಿಕ್ಸ್ ಅವತರಣಿಕೆಗಳಿಗೆ ನೃತ್ಯದ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾ ಬಂದಿರುವ ಅಂಕಿತ್‌ ಚೌಹಾಣ್‌ ಅಕಾ ಓಯ್‌‌ ಅಂಕಿತ್ ಹೆಸರಿನ ಬಳಕೆದಾರ ಅಂತರ್ಜಾಲದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ.

ಅಂಕಿತ್‌ರ ಈ ರೀಮಿಕ್ಸ್‌ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದರೆ, ಪ್ರತಿಯೊಂದು ವಿಡಿಯೋ ಸಹ 5,00,000ಕ್ಕಿಂತ ಹೆಚ್ಚು ವೀವ್ಸ್‌ ಪಡೆಯುತ್ತಾ ಬಂದಿವೆ.

 ಕಾಂಗ್ರೆಸ್ ಸಂಘಟನೆಗೆ ಹೊಸ ಸ್ವರೂಪ – ಡಿಕೆಶಿ ಮಹತ್ವದ ಕಾರ್ಯತಂತ್ರ

ಜರ್ಮನಿಯ ನೃತ್ಯಪಟುಗಳಾದ ಡೆನ್ನಿಸ್ ಕೈರೆ ಹಾಗೂ ಐಸಾಕ್ ಕೈರೆ ಎಂಬ ಅವಳಿ ಸಹೋದರರು ’ಕಭಿ ಖುಷಿ ಕಭಿ ಗಮ್’ ಚಿತ್ರದ ’ಭೋಲೆ ಚೂಡಿಯಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಈ ವಿಡಿಯೋ ಅಂಕಿತ್‌ ಶೇರ್‌ ಮಾಡಿದ್ದು 47 ದಶಲಕ್ಷ ವೀವ್ಸ್ ಸಿಕ್ಕಿದೆ. ಖುದ್ದು ಕೈರೆ ಸಹೋದರರ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋಗೆ ಸಿಕ್ಕಿದ್ದಕ್ಕಿಂತ ಹೆಚ್ಚು ವೀವ್ಸ್ ಅಂಕಿತ್‌ ಶೇರ್‌ ಮಾಡಿದ ವಿಡಿಯೋಗೆ ಸಿಕ್ಕಿದೆ.

ʼಯೋಗʼ ಮಾಡುವ ಮಧ್ಯೆ ನೀರು ಕುಡಿಯದಿರುವುದರ ಹಿಂದಿದೆ ಈ ಕಾರಣ

ಇದೇ ರೀತಿಯಲ್ಲಿ ಶಾರುಖ್‌ ಖಾನ್‌ರ ’ತುಮ್ಸೇ ಮಿಲ್ಕೇ ದಿಲ್ ಕಾ ಜೋ ಹೈ ಹಾಲ್’ ಹಾಡಿನ ರೀಮಿಕ್ಸ್‌ ವಿಡಿಯೋದಲ್ಲಿ ಜನಪ್ರಿಯ ಟಿವಿ ಸೀರೀಸ್‌ ’ಫ್ರೆಂಡ್ಸ್‌’ನ ಮುಂಚೂಣಿ ಪಾತ್ರಧಾರಿ ರಾಸ್‌ರ ಸಹೋದರ ಕ್ಯಾಸಿರ ಸೀನ್ ಒಂದನ್ನು ಸೆಟ್ ಮಾಡಲಾಗಿದೆ. ಈ ವಿಡಿಯೋ ಸಹ ಒಂದು ದಶಲಕ್ಷಕ್ಕೂ ಹೆಚ್ಚಿನ ವೀವ್ಸ್‌ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...