alex Certify ಕತ್ರಿನಾ ಅಕೌಂಟ್ ನಿಂದ ಅಚಾನಕ್ ಆಗಿ ಶೇರ್ ಆಯ್ತಾ ವಿಕಿ ಕೌಶಲ್ ಫೋಟೋ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಅಕೌಂಟ್ ನಿಂದ ಅಚಾನಕ್ ಆಗಿ ಶೇರ್ ಆಯ್ತಾ ವಿಕಿ ಕೌಶಲ್ ಫೋಟೋ..?

ಖ್ಯಾತ ಬಾಲಿವುಡ್ ನಟ-ನಟಿಯಾದ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ನಡುವೆ ಕುಚ್‌ ಕುಚ್ ನಡೆಯುತ್ತಿದೆ ಎಂಬುದಕ್ಕೆ ಈಗ ಫ್ಯಾನ್ಸ್ ಗಳಿಗೆ ಮತ್ತೊಂದು ಬಲವಾದ ಸಾಕ್ಷ್ಯ ಸಿಕ್ಕಿದೆ. ಅದೂ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ. ಇವರಿಬ್ಬರೂ ಒಟ್ಟಿಗೆ ನ್ಯೂ ಇಯರ್ ಆಚರಣೆ ಮಾಡಿದ್ದಾರೆಂಬುದು ಸೋಷಿಯಲ್ ಮೀಡಿಯಾ ಮೂಲಕ ಅಚಾನಕ್ ಆಗಿ ತಿಳಿದುಬಂದಿದೆ. ಹಾಗಾದರೆ ಆಗಿದ್ದೇನು….?

ಎಲ್ಲರೂ ಅಲಿಬಾಗ್ ನಲ್ಲಿ ನ್ಯೂ ಇಯರ್ ಪಾರ್ಟಿಯನ್ನು ಭರ್ಜರಿಯಾಗಿಯೇ ಮಾಡಿಕೊಂಡು 2021 ಅನ್ನು ಬರಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲೆ ತನ್ನ ಸ್ನೇಹಿತರ ಜೊತೆಗೆ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದಳು. ಈ ವೇಳೆ ಪರಸ್ಪರ ಫೋಟೋಗಳನ್ನೂ ಸಹ ಕ್ಲಿಕ್ಕಿಸಿಕೊಳ್ಳಲಾಗಿದೆ. ಫೋಟೋದಲ್ಲಿ ಇಸಾ ಹಾಗೂ ಆಕೆಯ ಸ್ನೇಹಿತರು ಕಂಡರೂ ಗೊತ್ತಿಲ್ಲದಂತೆ ಕತ್ರಿನಾ ಮತ್ತು ವಿಕ್ಕಿ ಸಿಕ್ಕಿಬಿದ್ದಿದ್ದಾರೆ.

ಅಂದರೆ ಇಸಾ ಹಿಂಬದಿಯಲ್ಲಿ ಗಾಜಿನ ಬಾಗಿಲಿದ್ದು, ಅದರಲ್ಲಿ ಕತ್ರಿನಾ ಹಾಗೂ ವಿಕ್ಕಿಯವರ ಪ್ರತಿಬಿಂಬ ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಕಾಣಿಸುತ್ತಿತ್ತು. ಈ ಫೋಟೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ತಮಗೇ ಅರಿವಿಲ್ಲದಂತೆ ಕತ್ರಿನಾ ಅವರು ಶೇರ್ ಮಾಡಿಕೊಂಡಿದ್ದರು. ಆದರೆ, ಅಭಿಮಾನಿ ಬಳಗ ತಮ್ಮ ಚಾಣಾಕ್ಷತೆಯನ್ನು ಮೆರೆದಿದ್ದು, ಗಾಜಿನಲ್ಲಿ ಕಾಣುವ ಫೋಟೋವನ್ನೂ ಕಂಡುಹಿಡಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯದ ಹಾಟ್ ಟಾಪಿಕ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...