alex Certify ಇಂಡಸ್ಟ್ರಿ ಯಾರಪ್ಪನ ಮನೆ ಸ್ವತ್ತಲ್ಲ. ‘ಜೋಗಿ’ ಪ್ರೇಮ್ ಗೇನು ಎರಡು ಕೊಂಬು ಇದ್ಯಾ? ಗುಡುಗಿದ ದರ್ಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಸ್ಟ್ರಿ ಯಾರಪ್ಪನ ಮನೆ ಸ್ವತ್ತಲ್ಲ. ‘ಜೋಗಿ’ ಪ್ರೇಮ್ ಗೇನು ಎರಡು ಕೊಂಬು ಇದ್ಯಾ? ಗುಡುಗಿದ ದರ್ಶನ್

ನಿರ್ದೇಶಕ ‘ಜೋಗಿ’ ಪ್ರೇಮ್ ಗೇನ್ ಎರಡು ಕೊಂಬು ಇದ್ಯಾ? ಎಂದು ನಟ ದರ್ಶನ್ ಪ್ರಶ್ನಿಸಿದ್ದಾರೆ. ನಿರ್ಮಾಪಕ ಉಮಾಪತಿ ವಿಚಾರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, 2016 ರಲ್ಲಿ ಜೋಗಿ ಪ್ರೇಮ್ ಅವರು ನಿರ್ಮಾಪಕ ಉಮಾಪತಿ ಅವರನ್ನು ಕರೆದುಕೊಂಡು ಬಂದಿದ್ದರು. ಆಗ ಪರಿಚಯವಾದ ಉಮಾಪತಿ ಬಂದು ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.

ಪ್ರೇಮ್ ಗೋಸ್ಕರ ಡೇಟ್ ನೀಡಲು ಆಗುತ್ತಾ? 2016 ರಲ್ಲಿ ನಿರ್ದೇಶಕ ಜೋಗಿ ಪ್ರೇಮ್, ಉಮಾಪತಿ ಅವರನ್ನು ಕರೆದುಕೊಂಡು ಸಿನಿಮಾ ಮಾಡೋಣ ಎಂದು ಬಂದು ಮಾತನಾಡಿದ್ದರು. ನಾನು ‘ತಾರಕ್’ ಪ್ರೆಸ್ ಮೀಟ್ ನಲ್ಲಿ ಯಾರಿಗೂ 70 ದಿನಗಳ ನಂತರ ಡೇಟ್ಸ್ ಕೊಡುವುದಿಲ್ಲ ಎಂದು ಹೇಳಿದ್ದೆ. ಆದರೆ, ಜೋಗಿ ಪ್ರೇಮ್ ಅವರಿಗೋಸ್ಕರ ದರ್ಶನ್ 100 ದಿನ ಡೇಟ್ಸ್ ಕೊಡ್ತಾರೆ ಎಂದು ಹೇಳಿದ್ರು.

ಉಮಾಪತಿ, ಜೋಗಿ ಪ್ರೇಮ್ ಮತ್ತು ನಾನು ಈ ಬಗ್ಗೆ ಮಾತನಾಡದಿದ್ದರೂ 100 ದಿನ ಡೇಟ್ಸ್ ಬಗ್ಗೆ ಹೇಳಿದ್ದರು. ನಿರ್ಮಾಪಕರೇ ಏನಿದು ಎಂದು ಕೇಳಿದೆ. ಪ್ರೇಮ್ ಗೇನು ಎರಡು ಕೊಂಬೈತಾ? ‘ಕರಿಯ’ದಲ್ಲಿ ನೋಡಿದ್ದೇನೆ. ಪ್ರೇಮ್ ಏನು ಅಂತ. ಅವರಿಗೆ ಎರಡು ಕೊಂಬು ಇದಿಯಾ ಈ ಸಿನಿಮಾ ಮಾಡಲ್ಲ ಎಂದಿದ್ದೆ.

ಇಂಡಸ್ಟ್ರಿ ಯಾರಪ್ಪನ ಮನೆ ಸ್ವತ್ತಲ್ಲ. ಯಾವನೂ ಏನೂ ಮಾಡಕಾಗಲ್ಲ, ಶಾರುಖ್ ಖಾನ್, ಅಮೀರ್ ಖಾನ್ ಗೆ ಏನಾಂದ್ರೂ ಇಂಡಸ್ಟ್ರಿಲಿ ಸಂಬಂಧವಿತ್ತಾ? ಕಲೆಗೆ ಬೆಲೆ ಇರುತ್ತೆ? ಅಭಿಮಾನಿಗಳು ಸಿನಿಮಾಗೆ ಬಂದ್ರೆ ಸಾಕು. ನಾನು ಯಾರಿಗೂ ಆನ್ಸರಬಲ್ ಅಲ್ಲ, ಅಭಿಮಾನಿಗಳಿಗೆ ಮಾತ್ರ ಉತ್ತರಿಸುತ್ತೇನೆ. ಜಗ್ಗೇಶ್ ಅವರಿಗೆ ನನ್ನ ಸೆಲೆಬ್ರಿಟಿಗಳಿಂದಾದ ತೊಂದರೆಗೆ ಕ್ಷಮೆ ಕೇಳಿದೆ. ಪ್ರೂಫ್ ಗಳು ಅಲ್ಲೂ ಇತ್ತು. ಸೀನಿಯರ್ ಎಂದು ಕ್ಷಮೆ ಕೇಳಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...