alex Certify ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ…?

ಜೀ ಕನ್ನಡ ವಾಹಿನಿಯ 15 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿ ಮಕ್ಕಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ನಿಮ್ಮ ಮೆಚ್ಚಿನ ಊಟ ಯಾವುದು ಎಂದು ಮಕ್ಕಳು ಕೇಳಿದಾಗ ನಮ್ಮ ತಾಯಿ ಮಾಡಿಕೊಡುವ ಬಿಸಿ ರೊಟ್ಟಿ ಎಂದು ಹೇಳಿದ್ದಾರೆ. ಈಗ ತಾಯಿಯವರು ಇಲ್ಲ. ಬೇರೆಯವರು ಮಾಡಿಕೊಟ್ಟ ರೊಟ್ಟಿಯನ್ನು ತಾಯಿ ಮಾಡಿಕೊಟ್ಟಿದ್ದಾರೆ ಎಂದು ಭಾವಿಸಿ ತಿನ್ನುತ್ತೇನೆ ಎಂದು ಹೇಳಿದ್ದಾರೆ.

ನನ್ನ ಮೆಚ್ಚಿನ ನಟ ರಾಜಕುಮಾರ್. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು… ಹಾಡು ನನಗೆ ಇಷ್ಟ. ಇದರೊಂದಿಗೆ ಬಾನಿಗೊಂದು ಎಲ್ಲೆ ಎಲ್ಲಿದೆ… ಹಾಡು ಕೂಡ ನನಗೆ ಇಷ್ಟವೆಂದು ತಿಳಿಸಿದ ಸಿಎಂ, ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಹಾಡಿದ್ದಾರೆ.

ನಿಮ್ಮ ಮೆಚ್ಚಿನ ಹೀರೋಯಿನ್ ಯಾರು ಎಂದು ಎದುರಾದ ಪ್ರಶ್ನೆಗೆ ಇದು ತುಂಬಾ ಟಫ್ ಕೊಶ್ಚನ್ ಎಂದು ಹಾಸ್ಯ ಚಟಾಕಿ ಹಾರಿಸಿದ ಸಿಎಂ, ನನಗೆ ಆಲ್ ಟೈಂ ಹೀರೋಯಿನ್ ಮಧುಬಾಲಾ. ನಮ್ಮ ಕಾಲದ ಕನ್ನಡ ನಟಿಯರಾದ ಕಲ್ಪನಾ, ಜಯಂತಿ, ಭಾರತಿ ಮೆಚ್ಚಿನ ನಾಯಕಿಯರು ಎಂದು ತಿಳಿಸಿದ್ದಾರೆ. ನಾನು ಸಿಎಂ ಅಂದ್ರೆ ಕಾಮನ್ ಮ್ಯಾನ್ ಎಂದು ಸಿಎಂ ಹೇಳುವ ಮೂಲಕ ಸರಳತೆ ಮೆರೆದು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿದ್ದಾರೆ. ನಿಮ್ಮನ್ನೆಲ್ಲ ನೋಡಿ ಮೊಮ್ಮಗು ಬೇಕು ಎನಿಸುತ್ತಿದೆ. ಮಗನಿಗೆ ಹೇಳುತ್ತೇನೆ ಎಂದು ಚಟಾಕಿ ಹಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...