alex Certify ಡ್ರಗ್ಸ್ ನಂಟಲ್ಲಿ ಚಿರು ಹೆಸರು, ಮೇಘನಾ ರಾಜ್ ಬೇಸರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ನಂಟಲ್ಲಿ ಚಿರು ಹೆಸರು, ಮೇಘನಾ ರಾಜ್ ಬೇಸರ

ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ನಂಟಿನ ಕುರಿತಾಗಿ ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಹೆಸರು ಕೇಳಿಬರುತ್ತಿರುವುದರಿಂದ ನಟಿ ಮೇಘನಾ ರಾಜ್ ಬೇಸರಗೊಂಡಿದ್ದಾರೆ.

ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಬಗ್ಗೆ ಮಾತನಾಡುವಾಗ ಇತ್ತೀಚೆಗೆ ಯುವ ನಟ ತೀರಿಹೋಗಿದ್ದು ಅವರ ಮರಣೋತ್ತರ ಪರೀಕ್ಷೆ ಆಗಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬ ಕುರಿತಾಗಿ ತನಿಖೆ ನಡೆಸಬೇಕು ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಪರ ಮತ್ತು ವಿರೋಧ ಚರ್ಚೆ ನಡೆದಿರುವಾಗಲೇ ಮಾಧ್ಯಮಗಳಲ್ಲಿ ಚಿರು ಫೋಟೋ ಗಮನಿಸಿದ ಮೇಘನಾರಾಜ್ ಬೇಸರಗೊಂಡಿದ್ದಾರೆ. ಚಿರು ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ ಅವರೊಂದಿಗೆ ವಾಟ್ಸಾಪ್ ಸಂದೇಶ ಹಂಚಿಕೊಂಡಿರುವ ಮೇಘನಾರಾಜ್ ಅವರು, ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪದಿಂದ ನೋವಾಗಿದೆ. ಚಿರಂಜೀವಿ ಸರ್ಜಾ ಈಗ ಉತ್ತರ ಕೊಡಲು ಸಾಧ್ಯವೇ? ಅವರು ಇಲ್ಲದಿದ್ದರೂ ಅವರನ್ನು ಬಿಡುತ್ತಿಲ್ಲ. ಅವರ ಹೆಸರು ಹೇಳಿದರೆ ಏನು ಸಿಗುತ್ತೆ? ಮಾಧ್ಯಮದಲ್ಲಿ ಫೋಟೋ ನೋಡಿದಾಗ ಕಣ್ಣೀರು ಬರುತ್ತದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...