alex Certify ಪ್ರಕಾಶ್​ ರಾಜ್​ ನಟನೆಗೆ ಚಿರಂಜೀವಿ ಫಿದಾ..​..!ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ ಮೆಗಾಸ್ಟಾರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕಾಶ್​ ರಾಜ್​ ನಟನೆಗೆ ಚಿರಂಜೀವಿ ಫಿದಾ..​..!ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ ಮೆಗಾಸ್ಟಾರ್​

ವೇಣು ಶ್ರೀರಾಮ್​​ರ ಸಿನಿಮಾ ‘ವಕೀಲ್​​ ಸಾಬ್’​ ಶುಕ್ರವಾರ ತೆರೆಗೆ ಅಪ್ಪಳಿಸಿದ ಬಳಿಕ ಪವನ್​ ಕಲ್ಯಾಣ್​, ನಿವೇಥಾ ಥೋಮಸ್​, ಅಂಜಿ ಹಾಗೂ ಅನನ್ಯಾ ಅವರ ಅಭಿನಯಕ್ಕೆ ಮೆಚ್ಚುಗೆ ಸಿಗೋದ್ರ ಜೊತೆಗೆ ಪ್ರಕಾಶ್​ ರಾಜ್​​ರ ಅಪ್ರತಿಮ ನಟನೆಗೂ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಸಿನಿಮಾದ ಎರಡನೇ ಭಾಗದಲ್ಲಿ ಪ್ರತಿಷ್ಠಿತ ವಕೀಲ ನಂದಾ ಎಂಬ ಪಾತ್ರದಲ್ಲಿ ಪ್ರಕಾಶ್​ ರಾಜ್​ ಕಾಣಿಸಿಕೊಳ್ತಾರೆ. ಪ್ರಕಾಶ್​ ರಾಜ್​ರ ಈ ನಟನೆಗೆ ಸ್ವತಃ ಮೆಗಾಸ್ಟಾರ್​ ಚಿರಂಜೀವಿ ಕೂಡ ಫಿದಾ ಆಗಿದ್ದು, ವೈಯಕ್ತಿಕವಾಗಿ ಪ್ರಕಾಶ್​ ರಾಜ್​ರನ್ನ ಭೇಟಿಯಾಗಿ ಶುಭಾಶಯ ಕೋರಿದ್ದಾರೆ.

ಪ್ರಕಾಶ್​​ ರಾಜ್​​ ರನ್ನ ಭೇಟಿಯಾದ ಫೋಟೋ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಚಿರಂಜೀವಿ, ನಿಮ್ಮ ತಂಡದಲ್ಲಿ ಪ್ರಕಾಶ್​ ರಾಜ್​​ರಂತಹ ನಟರಿದ್ದರೆ ಸಹನಟರೂ ಸಹ ಮತ್ತಷ್ಟು ಚೆನ್ನಾಗಿ ನಟಿಸ್ತಾರೆ. ವಕೀಲ್ ಸಾಬ್​ ಸಿನಿಮಾದಲ್ಲಿ ಪವನ್​ ಕಲ್ಯಾಣ್​​​ ಜೊತೆ ಅತ್ಯುತ್ತಮ ಅಭಿನಯ ಮಾಡಿದ್ದಾರೆ. ವಿಶೇಷವಾದ ಶುಭಾಶಯ ಪ್ರಕಾಶ್​ ಎಂದು ಶೀರ್ಷಿಕೆ ನೀಡಿದ್ದಾರೆ.

ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ತೆರಳಿದ್ದ ಚಿರಂಜೀವಿ ತಮ್ಮ ಸಹೋದರನ ನಟನೆಯನ್ನ ಸಖತ್​ ಎಂಜಾಯ್​ ಮಾಡಿದ್ದರು. ಸಂಪೂರ್ಣ ಸಿನಿಮಾ‌ ತಂಡಕ್ಕೆ ಚಿರಂಜೀವಿ ಶುಭಾಶಯವನ್ನ ಕೋರಿದ್ದರು. ಮಹೇಶ್​ ಬಾಬು, ರಾಮ್​ ಚರಣ್​, ವರುಣ್​ ತೇಜ್​ ಹಾಗೂ ಸಾಯು ಧರಮ್​ ತೇಜ್​ರಂತಹ ಸ್ಟಾರ್​ ನಟರು ಈ ಸಿನಿಮಾವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು.

— Chiranjeevi Konidela (@KChiruTweets) April 12, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...