alex Certify ಲಾಕ್ ಡೌನ್ ನಿಂದ ಅಕ್ಷಯ್ ಕುಮಾರ್ ಗೆ ದೊಡ್ಡ ನಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಿಂದ ಅಕ್ಷಯ್ ಕುಮಾರ್ ಗೆ ದೊಡ್ಡ ನಷ್ಟ

ಲಾಕ್ ಡೌನ್ ನಿಂದಾಗಿ ಯಾವುದೇ ಚಿತ್ರದ ಶೂಟಿಂಗ್ ನಡೆಯುತ್ತಿಲ್ಲ. ಇದ್ರಿಂದ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಈಗಾಗಲೇ ಬಿಡುಗಡೆಗೆ ಸಿದ್ಧವಾದ ಚಿತ್ರಗಳಲ್ಲಿ ಕೆಲ ಚಿತ್ರಗಳು ಆನ್ಲೈನ್ ನಲ್ಲಿ ಪ್ರಸಾರ ಮಾಡುವ ಸಿದ್ಧತೆ ನಡೆಸಿವೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಕ್ಷಯ್ ಕುಮಾರ್ ಗೆ ಲಾಕ್ ಡೌನ್ ಭಾರೀ ಹೊಡೆತ ನೀಡಿದೆ.

ಬಾಲಿವುಡ್ ನ ಯಶಸ್ವಿ ನಟರಲ್ಲಿ ಅಕ್ಷಯ್ ಒಬ್ಬರು. ಅಕ್ಷಯ್ ವರ್ಷಕ್ಕೆ ನಾಲ್ಕೈದು ಚಿತ್ರಗಳನ್ನು ಮಾಡ್ತಾರೆ. ಉಳಿದ ಬಾಲಿವುಡ್ ನಟರಿಗಿಂತ ಅಕ್ಷಯ್ ಗೆ ಹೆಚ್ಚಿನ ನಷ್ಟವಾಗಿದೆಯಂತೆ. 7 ಚಿತ್ರಗಳು ಸಂಕಷ್ಟದಲ್ಲಿವೆ ಎನ್ನಲಾಗ್ತಿದೆ. ರೋಹಿತ್ ಶೆಟ್ಟಿಯ ಸೂರ್ಯವಂಶಿ ಚಿತ್ರ ಇದ್ರಲ್ಲಿ ಸೇರಿದೆ. ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಲಾಕ್‌ಡೌನ್ ಕಾರಣ ಚಿತ್ರ ತೆರೆಗೆ ಬಂದಿಲ್ಲ.

ಇದಲ್ಲದೆ ಲಕ್ಷ್ಮಿ ಬಾಂಬ್ ನಲ್ಲಿ ಅಕ್ಷಯ್ ನಟಿಸಿದ್ದಾರೆ. ಇದಲ್ಲದೆ ಬೆಲ್ ಬಾಟಮ್ 2020ರ ವೇಳೆಗೆ ಬಿಡುಗಡೆಯಾಗಬೇಕಿತ್ತು. ಆ ಚಿತ್ರ ಕೂಡ ಅರ್ಧಕ್ಕೆ ನಿಂತಿದೆ. ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಸೇರಿದಂತೆ ಅನೇಕ ಚಿತ್ರಗಳು ಅರ್ಧಕ್ಕೆ ನಿಂತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...