alex Certify ʼಬಾಬಿವುಡ್ ಪೇಜ್ʼ ಗೆ ಸಿನಿ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾಬಿವುಡ್ ಪೇಜ್ʼ ಗೆ ಸಿನಿ ಅಭಿಮಾನಿಗಳು ಫಿದಾ

ಅಂತರ್ಜಾಲವೇ ಹಾಗೆ ನೋಡಿ. ದಿನಬೆಳಗಾದರೆ ಏನಾದರೊಂದು ಕ್ರಿಯೇಟಿವ್‌ ವಿಚಾರಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಮೀಮ್‌ಗಳು ನೆಟ್ಟಿಗರ ದೈನಂದಿನ ಮನರಂಜನೆಯ ಡೋಸ್‌ಗಳಾಗಿಬಿಟ್ಟಿವೆ.

ಸಾಮಾಜಿಕ ಜಾಲತಾಣದಲ್ಲಿರುವ ಕೆಲವೊಂದು ಪೇಜ್‌ಗಳು ಮೀಮ್‌ ಸೃಷ್ಟಿಸುವುದರಲ್ಲಿ ಎತ್ತಿದ ಕೈಗಳು. ಬಾಲಿವುಡ್ ನಟ ಬಾಬ್ಬಿ ಡಿಯೋಲ್ ಅಭಿಮಾನಿಗಳು ಸೇರಿಕೊಂಡು ಮಾಡಿರುವ ’ಬಾಬಿವುಡ್‌’ ಪೇಜ್‌ ತನ್ನ ಫನ್ನಿ ಮೀಮ್‌ಗಳಿಂದ ಸಖತ್‌ ವೈರಲ್ ಆಗಿದೆ.

ಕಾರು ಖರೀದಿದಾರರಿಗೆ SBI ನಿಂದ ಬಂಪರ್: ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

ಜನಪ್ರಿಯ ಸಿನಿಮಾಗಳ ಫೇಮಸ್ ದೃಶ್ಯಗಳಿಗೆ ಬಾಬಿರನ್ನು ಮಾರ್ಫ್ ಮಾಡುವುದರಿಂದ ಹಿಡಿದು, ಖುದ್ದು ಅವರದ್ದೇ ಸಿನಿಮಾಗಳ ದೃಶ್ಯಗಳನ್ನು ಬಳಸಿಕೊಂಡ ದೈನಂದಿನ ಘಟನೆಗಳನ್ನೇ ವಿಡಂಬನಾತ್ಮಕವಾಗಿ ತೋರುವ ಮೀಮ್‌ಗಳು ಈ ಪೇಜ್‌ನಲ್ಲಿ ಸಾಕಷ್ಟು ಇದ್ದು, ನೆಟ್ಟಿಗರು ಇವುಗಳನ್ನು ನೋಡಿ ಸಖತ್‌ ಏಂಜಾಯ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...