alex Certify ಇಂಟರ್ನೆಟ್​ ಸೆನ್ಸೇಷನ್​ ‘ಬಚಪನ್​ ಕಾ ಪ್ಯಾರ್​’ ಹಾಡನ್ನು ರಿಲೀಸ್ ಮಾಡಿದ ಬಾದ್​ ಶಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್​ ಸೆನ್ಸೇಷನ್​ ‘ಬಚಪನ್​ ಕಾ ಪ್ಯಾರ್​’ ಹಾಡನ್ನು ರಿಲೀಸ್ ಮಾಡಿದ ಬಾದ್​ ಶಾ

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ‘ ಜಾನೆ ಮೇರಿ ಜಾನೇಮನ್​​ ಬಚ್​ಪನ್​ ಕಾ ಪ್ಯಾರ್​’ ಹಾಡು ಸಖತ್​ ಸೌಂಡ್​ ಮಾಡ್ತಿದೆ. ಇದೀಗ ಇಂಡಿಯನ್​​ ರ್ಯಾಪರ್​​ ಬಾದ್​ ಶಾ ತಮ್ಮ ಹೊಸ ಗೀತೆ ರೂಪದಲ್ಲಿ ಇದೇ ಹಾಡನ್ನು ರೂಪಾಂತರಗೊಳಿಸಿದ್ದಾರೆ.

ಈ ರ್ಯಾಪ್​ ಸಾಂಗ್​​ಗೆ ಬಾದ್​ ಶಾ ಸದ್ಯದ ಇಂಟರ್ನೆಟ್​ ಸೆನ್ಸೇಷನ್​​​ ಸಹದೇವ್​ ದಿರ್ಡೋ ಜೊತೆ ಕೈ ಜೋಡಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ  ಬಾದ್​ ಶಾ ಸಾಂಗ್​ ರಿಲೀಸ್​ ಮಾಡಿರುವ ಮಾಹಿತಿಯನ್ನು  ಶೇರ್​ ಮಾಡಿದ್ದಾರೆ. ಈ ಆಲ್ಬಂ ಸಾಂಗ್​ನಲ್ಲಿ ಸಹದೇವ್​ ದಿರ್ಡೋ, ಆಸ್ಥಾ ಗಿಲ್​​ ಹಾಗೂ ರಿಕೋ ಜೊತೆ ಕೆಲಸ ಮಾಡಿದ್ದಾರೆ.

ಶಾಲೆಯೊಂದರಲ್ಲಿ ಬಚ್​ಪನ್​ ಕಾ ಪ್ಯಾರ್​ ಎಂಬ ಹಾಡನ್ನು ಹಾಡುತ್ತಿರುವ ಸಹದೇವ್​ರ ಹಾಡು ರಾತ್ರೋ ರಾತ್ರಿ ಇಂಟರ್ನೆಟ್​​ನಲ್ಲಿ ಸೆನ್ಸೇಷನ್​​ ಕ್ರಿಯೇಟ್​ ಮಾಡಿತ್ತು. ಚತ್ತೀಸಗಢದ ಸುಕ್ಮಾ ಜಿಲ್ಲೆಯ 10 ವರ್ಷದ ಬಾಲಕ ಸಹದೇವ್​ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದ.

ಅಂದಹಾಗೆ ಈ ವಿಡಿಯೋವನ್ನು 2019ರಲ್ಲಿ ಚಿತ್ರೀಕರಿಸಲಾಗಿದೆ. ತರಗತಿಯಲ್ಲಿ ಶಿಕ್ಷಕರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...