alex Certify ಶಾರುಖ್ ಟಿವಿಗಳಿಗೆ ಮಾಡಿರೋ ವೆಚ್ಚದಲ್ಲಿ ನಾವು ಮನೆಯನ್ನೇ ನಿರ್ಮಿಸಬಹುದು ಅಂದ್ರು ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್ ಟಿವಿಗಳಿಗೆ ಮಾಡಿರೋ ವೆಚ್ಚದಲ್ಲಿ ನಾವು ಮನೆಯನ್ನೇ ನಿರ್ಮಿಸಬಹುದು ಅಂದ್ರು ನೆಟ್ಟಿಗರು….!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಬ್ರ್ಯಾಂಡ್ ಈವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ, ಈ ಬ್ರ್ಯಾಂಡ್‌ನ ಅಭಿಮಾನಿ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿ ಸುಮಾರು 30-40 ಲಕ್ಷ ರೂಪಾಯಿ ಮೌಲ್ಯದ ಟಿವಿಗಳಿವೆ ಎಂದು ಬಹಿರಂಗಪಡಿಸಿದ್ದಾರೆ.

ಹೌದು, ಇತ್ತೀಚೆಗೆ ಶಾರುಖ್‍ರ ನಿವಾಸದ ಹೆಸರು ಮನ್ನತ್‍ನ ನೇಮ್ ಪ್ಲೇಟ್ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ತಮ್ಮ ನಿವಾಸದಲ್ಲಿ ಇಷ್ಟೊಂದು ಮೌಲ್ಯದ ಟಿವಿಗಳಿವೆ ಎಂದು ಹೇಳಿದ್ದು, ಜನರನ್ನು ಬೆಕ್ಕಸ ಬೆರಗಾಗಿಸಿದೆ. ತಮ್ಮ ಮನೆಯಲ್ಲಿ ಯಾವ್ಯಾವ ಕೋಣೆಯಲ್ಲಿ ಟಿವಿಗಳನ್ನು ಇಡಲಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಶಾರುಖ್ ಮಲಗುವ ಕೋಣೆಯಲ್ಲಿ ಒಂದು ಟಿವಿ ಇರಿಸಲಾಗಿದ್ದರೆ, ಲಿವಿಂಗ್ ರೂಮಿನಲ್ಲೂ ಕೂಡ ಒಂದನ್ನು ಇಡಲಾಗಿದೆ. ಶಾರುಖ್ ಪುಟ್ಟ ಮಗ ಅಬ್ರಾಹಂ, ಹಿರಿಯ ಪುತ್ರ ಆರ್ಯನ್ ಹಾಗೂ ಮಗಳ ಕೋಣೆಯಲ್ಲಿ ಸಹ ಒಂದೊಂದು ಟಿವಿಯನ್ನು ಇಡಲಾಗಿದೆ.

ಶಾರುಖ್ ಅವರ ಮನೆಯಲ್ಲಿ ಸುಮಾರು 11 ರಿಂದ 12 ಟಿವಿಗಳಿವೆ ಎಂದು ಅಂದಾಜಿಸಿದ್ದಾರೆ. ಪ್ರತಿ ದೂರದರ್ಶನದ ಬೆಲೆ ಸುಮಾರು ಒಂದು ಲಕ್ಷ, ಮತ್ತು ಅದಕ್ಕಿಂತ ಹೆಚ್ಚಿನದ್ದಾಗಿದೆ. ಟಿವಿಗಾಗಿ ತಾನು ಸುಮಾರು 30-40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಶಾರುಖ್ ರ ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರು ಖರೀದಿಸಿರೋ ಟಿವಿಯಲ್ಲಿ ಒಂದು ಮನೆಯನ್ನೇ ನಿರ್ಮಿಸಬಹುದು ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

— Ashish Pareek (@pareektweets) May 24, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...