alex Certify ಆನ್‌ ಲೈನ್ ನಲ್ಲಿ ಬಿಡುಗಡೆಯಾಗಲಿದೆ ಅಮಿತಾಬ್ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ ಲೈನ್ ನಲ್ಲಿ ಬಿಡುಗಡೆಯಾಗಲಿದೆ ಅಮಿತಾಬ್ ಚಿತ್ರ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಭಿನಯದ ʼಗುಲಾಬೋ ಸಿತಾಬೋʼ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.‌ ಲಾಕ್ ಡೌನ್ ನಿಂದಾಗಿ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆಯಾಗ್ತಿಲ್ಲ. ಮೇಕರ್ಸ್ ಚಿತ್ರವನ್ನು ಆನ್‌ ಲೈನ್ ನಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ನಿರ್ದೇಶಕ ಶುಜಿತ್ ಸರ್ಕಾರ್ ಅವರ ಈ ಚಿತ್ರ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಜೂನ್ 12 ರಂದು ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ. ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಸ್ವತಃ ತಮ್ಮ ಅಭಿಮಾನಿಗಳಿಗೆ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೀಡಿದ್ದಾರೆ.

ಆಯುಷ್ಮಾನ್ ಖುರಾನಾ ಮತ್ತು ಅಮಿತಾಬ್ ಬಚ್ಚನ್ ಅವರ ‘ಗುಲಾಬೋ ಸಿತಾಬೋ’ ಚಿತ್ರವನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಲಾಗಿತ್ತು. ಚಿತ್ರ ಏಪ್ರಿಲ್ 17 ರಂದು ಬಿಡುಗಡೆಯಾಗಬೇಕಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...