alex Certify ಪುಟ್ಟ ಅಭಿಮಾನಿ ಆಸೆ ಈಡೇರಿಸಿದ ಸ್ಟೈಲಿಶ್ ಸ್ಟಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಅಭಿಮಾನಿ ಆಸೆ ಈಡೇರಿಸಿದ ಸ್ಟೈಲಿಶ್ ಸ್ಟಾರ್

ಟಾಲಿವುಡ್ ಸೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಪುಟ್ಟ ಅಭಿಮಾನಿಯೊಬ್ಬರ ಬಹುದಿನಗಳ ಆಸೆ ಈಡೇರಿಸಿದ್ದಾರೆ. ತನ್ನ ನೆಚ್ಚಿನ ನಟ ತನ್ನ ಬಯಕೆ ಈಡೇರಿಸಿದ ಸಂಭ್ರಮದಲ್ಲಿ ಬಾಲಕ ಖುಷಿಯಾಗಿದ್ದಾನೆ.

ನಟಿ ವಿತಿಕಾ ಶೆರು ಅನಾಥಾಶ್ರಮವೊಂದರಲ್ಲಿ ಸೀಕ್ರೆಟ್ ಸಾಂತಾ ವಿಡಿಯೋ ಮಾಡುತ್ತಿದ್ದ ವೇಳೆ ಪುಟ್ಟ ಮಕ್ಕಳ ಬಳಿ ಈ ವರ್ಷ ಸಾಂತಾಕ್ಲಾಸ್ ನಿಮ್ಮ ಯಾವ ಆಸೆ ಈಡೇರಿಸಬೇಕು ಎಂದು ಕೇಳಿದ್ದಾರೆ. ಈ ವೇಳೆ ಮಕ್ಕಳು ಒಬ್ಬೊಬ್ಬರು ಒಂದೊಂದು ಆಸೆಯನ್ನು ಬರೆದುಕೊಟ್ಟಿದ್ದಾರೆ.

ಅವರಲ್ಲಿ ಓರ್ವ ಬಾಲಕ ಅಲ್ಲು ಅರ್ಜುನ್ ಅವರ ಆಟೋಗ್ರಾಫ್ ಬೇಕೆಂದು ಬರೆದಿದ್ದಾನೆ. ಈ ಬಗ್ಗೆ ವಿತಿಕಾ ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿ ನಟ ಅಲ್ಲು ಅರ್ಜುನ್ ಅವರಿಗೆ ಬಾಲಕನ ಆಸೆ ಈಡೇರಿಸಿ, ಬಾಲಕನ ಪಾಲಿನ ಸಾಂತಾಕ್ಲಾಸ್ ಆಗಿ ಎಂದು ಮನವಿ ಮಾಡಿದ್ದರು.

ಇದೀಗ ಅಲ್ಲು ಅರ್ಜುನ್ ತಮ್ಮ ಪುಟ್ಟ ಅಭಿಮಾನಿ ಆಸೆ ಈಡೇರಿಸಿದ್ದು, ಬಾಲಕನಿಗೆ ಆಟ್ರೋಗ್ರಾಫ್ ಬರೆದು ಕಳುಹಿಸಿದ್ದಾರೆ. ಇದರಿಂದ ಖುಷಿಯಾಗಿರುವ ಬಾಲಕ ತನ್ನ ಸಹಪಾಠಿಗಳ ಜೊತೆ ಸಂತಸದಿಂದ ಕ್ರಿಸ್ ಮಸ್ ಆಚರಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...