alex Certify ರಾಜೀವ್‌ ಕಪೂರ್‌ ನಿಧನ: ರಣಬೀರ್‌ ಕಪೂರ್‌ ಕುಟುಂಬದ ಜೊತೆಗಿರಲು ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿದ ಆಲಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜೀವ್‌ ಕಪೂರ್‌ ನಿಧನ: ರಣಬೀರ್‌ ಕಪೂರ್‌ ಕುಟುಂಬದ ಜೊತೆಗಿರಲು ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿದ ಆಲಿಯಾ

ಬಾಲಿವುಡ್ ಹಿರಿಯ ನಟ ರಾಜೀವ್‌ ಕಪೂರ್‌ ನಿಧನರಾದ ಸುದ್ದಿ ಕೇಳುತ್ತಲೇ ತಮ್ಮ ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿರುವ ಆಲಿಯಾ ಭಟ್ ಮುಂಬಯಿಗೆ ಮರಳಿದ್ದಾರೆ. ರಕ್ತ ಸಂಬಂಧಿಯ ಅಗಲಿಕೆಯ ನೋವಿನಲ್ಲಿರುವ ರಣಬೀರ್‌ ಕಪೂರ್‌‌ ಕುಟುಂಬದ ನೋವು ಹಂಚಿಕೊಳ್ಳಲು ಆಲಿಯಾ ವಾಪಸ್ ಬಂದಿದ್ದಾರೆ.

ಸಹೋದರಿ ಶಹೀನ್ ಭಟ್‌ ಹಾಗೂ ಸ್ನೇಹಿತರಾದ ಅನುಷ್ಕಾ ಹಾಗೂ ಆಕಾಂಕ್ಷಾ ರಂಜನ್ ಜೊತೆಯಲ್ಲಿ ಆಲಿಯಾ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮಾಡುತ್ತಿದ್ದರು.

ಸಿನಿಮಾ ದೃಶ್ಯವನ್ನ ವಿಭಿನ್ನವಾಗಿ ಮರು ಚಿತ್ರೀಕರಿಸಿದ ಫೋಟೋಗ್ರಾಫರ್​..!

ಮುಂಬಯಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆಲಿಯಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರು ಧರಿಸಿದ ಬಟ್ಟೆಗಳ ಡೀಟೇಲ್‌ಗಳನ್ನು ಸಹ ದೊಡ್ಡ ಸುದ್ದಿಯಂತೆ ಸಿನೆಮಾ ಪೋರ್ಟಲ್‌ಗಳಲ್ಲಿ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...