alex Certify ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಶೂಟಿಂಗ್ ಶುರು ಮಾಡಿದ ಬಿಗ್ ಬಿ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಶೂಟಿಂಗ್ ಶುರು ಮಾಡಿದ ಬಿಗ್ ಬಿ ಸೊಸೆ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ಅನೇಕ ವರ್ಷಗಳ ನಂತ್ರ ಐಶ್ವರ್ಯ ರೈ ಮತ್ತೆ ತೆರೆ ಮೇಲೆ ಬರ್ತಿದ್ದಾರೆ. ಐಶ್ವರ್ಯ ಹೊಸ ಚಿತ್ರದ ಶೂಟಿಂಗ್ ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಐಶ್ವರ್ಯ, ಪತಿ ಅಭಿಷೇಕ್ ಹಾಗೂ ಮಗಳು ಆರಾಧ್ಯ ಜೊತೆ ಹೈದ್ರಾಬಾದ್ ಗೆ ಬಂದಿಳಿದಿದ್ದರು. ಅಲ್ಲಿಂದ ಐಶ್ವರ್ಯ ಹೈದ್ರಾಬಾದ್ ನಲ್ಲಿಯೇ ಇದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರುತಿ ಹಾಸನ್

ಐಶ್ವರ್ಯ, ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ ಹೊಸ ಫೋಟೋ ಈಗ ಬಹಿರಂಗವಾಗಿದೆ. ಐಶ್ವರ್ಯ ಶೂಟಿಂಗ್ ನಲ್ಲಿರುವ ಫೋಟೋ ಇದಾಗಿದೆ. ಮಾಡೆಲ್ ಹಾಗೂ ನಟಿ ಅರುಶಿಮಾ ಇನ್ಸ್ಟ್ರಾಗ್ರಾಮ್ ನಲ್ಲಿ ಐಶ್ವರ್ಯ ರೈ ಫೋಟೋ ಹಂಚಿಕೊಂಡಿದ್ದಾರೆ. ಕಾರ್ ನಲ್ಲಿ ಐಶ್ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ಅರುಶಿಮಾ, ಪೊನ್ನಿಯಿನ್ ಸೆಲ್ವನ್ ಶೂಟಿಂಗ್ ಸೆಟ್ ನಲ್ಲಿ ಐಶ್ವರ್ಯ ರೈ ಎಂದು ಬರೆದುಕೊಂಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ನಟ ಅಕ್ಷಯ್​ ಕುಮಾರ್​ ದೇಣಿಗೆ: ಅಭಿಮಾನಿಗಳಿಗೂ ಕೊಡುಗೆ ನೀಡುವಂತೆ ಮನವಿ

ಐಶ್ವರ್ಯ ರೈ ಮೇಕಪ್ ಹಾಗೂ ಹೇರ್ ಸ್ಟೈಲ್ ಗಾಗಿ ಫ್ರೆಂಚ್ ನ ಫ್ಲೋರಿಯನ್ ಹ್ಯೂರೆಲ್ ಅವರನ್ನು ನೇಮಿಸಲಾಗಿದೆ. ಐಶ್ವರ್ಯ ರೈ ಚಿತ್ರದಲ್ಲಿ ಐದು ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಐಶ್ವರ್ಯ ರೈ ಜೊತೆ ಕೆಲಸ ಮಾಡುವುದು ನನಗೆ ವಿಶೇಷವಾಗಿದೆ ಎಂದು ಫ್ಲೋರಿಯನ್ ಹ್ಯೂರೆಲ್ ಹೇಳಿದ್ದಾರೆ.‌

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...