ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಪುತ್ರ ಆದಿತ್ಯ ನಾರಾಯಣ್ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರಿಗೆ ಚಿರಪರಿಚಿತರು. ಸಂಗೀತದ ಜೊತೆ ಜೊತೆಗೆ ನಿರೂಪಕರಾಗಿ, ಅನೇಕ ಶೋಗಳಲ್ಲಿ ಸ್ಪರ್ಧಿಯಾಗಿಯೂ ಜನಮನ ಗೆದ್ದಂತವರು. ಈ ಮಲ್ಟಿ ಟ್ಯಾಲೆಂಟೆಡ್ ಸಿಂಗರ್ ಈಗ ತಮ್ಮ ಆರ್ಥಿಕ ಸಂಕಷ್ಟವನ್ನ ಹೇಳಿಕೊಂಡಿದ್ದಾರೆ.
ಕೊರೊನಾ ವೈರಸ್ , ಲಾಕ್ಡೌನ್ನಿಂದಾಗಿ ಅನೇಕರು ತಮ್ಮ ಜೇಬನ್ನ ಖಾಲಿ ಮಾಡಿಕೊಂಡಿದ್ದಾರೆ. ಈ ಸಾಲಿಗೆ ಗಾಯಕ ಆದಿತ್ಯ ನಾರಾಯಣ್ ಕೂಡ ಸೇರಿದ್ದಾರೆ. ತಮ್ಮ ಆರ್ಥಿಕ ಸಂಕಷ್ಟವನ್ನ ಖುದ್ದು ಬಯಲು ಮಾಡಿರುವ ಆದಿತ್ಯ ನಾರಾಯಣ್, ತಮ್ಮ ಬ್ಯಾಂಕ್ ಖಾತೆಯಲ್ಲಿ ಕೇವಲ 18,000 ರೂ. ಉಳಿದುಕೊಂಡಿದೆ ಅಂತಾ ಹೇಳಿದ್ದಾರೆ.
ಆದಿತ್ಯ ನಾರಾಯಣ್ 2020 ಆರಂಭವಾದ ಸಮಯದಲ್ಲಿ ತಾನು ಅರ್ಧ ವರ್ಷಗಳ ಕಾಲ ಕೆಲಸವೇ ಇಲ್ಲದೇ ಮನೆಯಲ್ಲಿ ಕೂರೋ ಸಂದರ್ಭ ಬರುತ್ತೆ ಅಂತಾ ಭಾವಿಸಿಯೇ ಇರಲಿಲ್ಲವಂತೆ. ಆದರೆ ಲಾಕ್ಡೌನ್ ಇವರ ಎಲ್ಲಾ ಪ್ಲಾನ್ಗಳನ್ನ ಬುಡಮೇಲು ಮಾಡಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಆದಿತ್ಯ ನಾರಾಯಣ್, ಸರ್ಕಾರ ಏನಾದ್ರೂ ಲಾಕ್ ಡೌನ್ನ್ನ ಮತ್ತೆ ಜಾರಿ ಮಾಡಿದ್ರೆ ಜನರು ಹಸಿವಿನಿಂದಲೇ ಸಾಯುತ್ತಾರೆ. ಈ ವರ್ಷ ಕೆಲಸವೇ ಸಿಗದ ಕಾರಣ ಮ್ಯೂಚುವಲ್ ಫಂಡ್ಗಳಲ್ಲಿ ಕೂಡಿಟ್ಟಿದ್ದ ಹಣವನ್ನೆಲ್ಲ ತೆಗೆದು ಖಾಲಿ ಮಾಡಿಬಿಟ್ಟಿದ್ದೇನೆ. ಸದ್ಯ ನನ್ನ ಖಾತೆಯಲ್ಲಿ ಕೇವಲ 18 ಸಾವಿರ ರೂಪಾಯಿ ಬಾಕಿ ಉಳಿದಿದೆ. ಅಕ್ಟೋಬರ್ ತಿಂಗಳಲ್ಲೂ ನಾನು ಕೆಲಸ ಶುರು ಮಾಡಿಲ್ಲ ಅಂದರೆ ನನ್ನ ಬಳಿ ಹಣವೇ ಉಳಿಯಲ್ಲ. ನನ್ನ ಬೈಕ್ ಮಾರಿ ಹಣ ಸಂಪಾದಿಸೋ ದುರ್ಗತಿ ಬರಬಹುದು ಅಂತಾ ಬೇಸರ ಹೊರಹಾಕಿದ್ದಾರೆ.