alex Certify ಉದಿತ್​ ನಾರಾಯಣ್ ​ರ ʼಐಸಾ ದೇಸ್​ ಹೈ ಮೇರಾ…..’ ಹಾಡಿಗೆ ಮಂತ್ರಮುಗ್ಧರಾದ ಕೇಂದ್ರ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದಿತ್​ ನಾರಾಯಣ್ ​ರ ʼಐಸಾ ದೇಸ್​ ಹೈ ಮೇರಾ…..’ ಹಾಡಿಗೆ ಮಂತ್ರಮುಗ್ಧರಾದ ಕೇಂದ್ರ ಸಚಿವ

80 ಅಥವಾ 90ರ ದಶಕದಲ್ಲಿ ಉದಿತ್​ ನಾರಾಯಣ್​ ತಮ್ಮ ಸಂಗೀತದ ಮ್ಯಾಜಿಕ್​ ಮೂಲಕ ದೊಡ್ಡ ಅಭಿಮಾನಿಗಳನ್ನೇ ಸೃಷ್ಟಿಸಿಕೊಂಡಿದ್ದರು. ದೇಶಭಕ್ತಿ ಗೀತೆಗಳಿಂದ ಹಿಡಿದು ರೊಮ್ಯಾಂಟಿಕ್​ ಹಾಡುಗಳವರೆಗೆ ಅವರು ಎಲ್ಲಾ ಬಗೆಯ ಹಾಡನ್ನೂ ಹಾಡಿ ಗಮನ ಸೆಳೆದಿದ್ದರು. ಅದರಲ್ಲೂ ದೇಶಭಕ್ತಿ ಗೀತೆಗಳನ್ನು ತಮ್ಮ ರೇಷ್ಮೆಯಂತಹ ಕಂಠದಿಂದ ಹಾಡಿ ದೇಶದ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದರು.

ಇದೀಗ ಅವರ ಅಭಿಮಾನಿಗಳ ಪಟ್ಟಿಗೆ ಕಾನೂನು ಸಚಿವ ಕಿರಣ್​ ರಿಜಿಜು ಕೂಡ ಸೇರ್ಪಡೆಯಾಗಬಹುದು. ಉದಿತ್​ ನಾರಾಯಣ್​ ಅವರು ʼಐಸಾ ದೇಸ್​ ಹೈ ಮೇರಾ’ ಹಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅದು ನಿಸ್ಸಂಶಯವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

31 ಸೆಕೆಂಡ್​ಗಳ ವಿಡಿಯೋ ಕ್ಲಿಪ್​ನಲ್ಲಿ ಉದಿತ್​ ನಾರಾಯಣ್​, 2004ರ ಚಲನಚಿತ್ರ ವೀರ್​ ಝಾರಾದ ʼಐಸಾ ದೇಸ್​ ಹೈ ಮೇರಾʼ ಹಾಡಿದ್ದಾರೆ. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದಾಗ ರೂಮಿನಲ್ಲಿದ್ದವರೆಲ್ಲರೂ ಭಕ್ತಿಪರವಶರಾಗಿ ಕೇಳುತ್ತಿದ್ದರೆ, “ಕ್ಯಾ ಬಾತ್​ ಹೈ, ಉದಿತ್​ ಜಿ ಆಪ್ನೆ ಕಮಾಲ್​ ಕರ್​ ದಿಯಾ ಉದಿತ್​ ಜೀ‌” ಎಂದು ರಿಜಿಜು ಶ್ಲಾಘಿಸಿದರು.

ಉದಿತ್​ ನಾರಾಯಣ್​ ಜಿ ಅವರ ಸೌಜನ್ಯದ ಭೇಟಿಯನ್ನು ಮಾಡಿದೆ. ಒಂದು ಇಡೀ ಪೀಳಿಗೆಯು ಅವರ ರೋಮ್ಯಾಂಟಿಕ್​ ಸುಮಧುರ ಹಾಡುಗಳನ್ನು ಕೇಳಿ ಬೆಳೆದಿದೆ ಎಂದು ರಿಜಿಜು ಬರೆದುಕೊಂಡಿದ್ದಾರೆ.

ನೆಟ್ಟಿಗರು ರಿಜಿಜು ಮಾತನ್ನು ಒಪ್ಪಿ ಶ್ಲಾಘಿಸಿದ್ದಾರೆ. ರಿಜಿಜು ಅವರು ಉದಿತ್​ ನಾರಾಯಣ್​ ಅವರೊಂದಿಗಿನ ಕೆಲವು ಚಿತ್ರಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಾಡಿದ ಮೆಗಾ ಹಿಟ್​ ಹಾಡುಗಳ ಸಾಲನ್ನು ಶೀರ್ಷಿಕೆಯಲ್ಲಿ ಸೇರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...