alex Certify ಸಿಹಿ ಸುದ್ದಿ ಹಂಚಿಕೊಂಡ ಖ್ಯಾತ ಗಾಯಕ ಉದಿತ್​ ನಾರಾಯಣ್​ ಪುತ್ರ ಆದಿತ್ಯ ನಾರಾಯಣ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ಸುದ್ದಿ ಹಂಚಿಕೊಂಡ ಖ್ಯಾತ ಗಾಯಕ ಉದಿತ್​ ನಾರಾಯಣ್​ ಪುತ್ರ ಆದಿತ್ಯ ನಾರಾಯಣ್​

ಖ್ಯಾತ ಗಾಯಕ ಉದಿತ್​ ನಾರಾಯಣ್​ ಪುತ್ರ ಗಾಯಕ ಹಾಗೂ ನಟ ಆದಿತ್ಯ ನಾರಾಯಣ್​ ಮತ್ತು ನಟಿ ಶ್ವೇತಾ ಅಗರ್​ವಾಲ್​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಸೋಶಿಯಲ್​ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾದ ಫೋಟೋಗಳಲ್ಲಿ ಶ್ವೇತಾ ಅಗರ್​ವಾಲ್​ ಬೇಬಿ ಬಂಪ್​ ಕೂಡ ಕಾಣುತ್ತಿದೆ.

ಶ್ವೇತಾ ಹಾಗೂ ನಾನು ನಮ್ಮ ಮೊದಲ ಮಗುವನ್ನು ಶೀಘ್ರದಲ್ಲಿಯೇ ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಲು ತುಂಬಾನೇ ಸಂತಸವಾಗುತ್ತಿದೆ ಎಂದು ಆದಿತ್ಯ ನಾರಾಯಣ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟಿ ಶ್ವೇತಾ ಅಗರ್​ವಾಲ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಈ ಗುಡ್​ ನ್ಯೂಸ್​ನ್ನು ಶೇರ್​ ಮಾಡಿದ್ದಾರೆ.

ಶ್ವೇತಾ ಹಾಗೂ ನಾನು ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ಕಾಯುತ್ತಿದ್ದೇವೆ. ನನಗಂತೂ ಇದು ಅತಿ ವಾಸ್ತವಿಕ ಎನಿಸುತ್ತಿದೆ. ನನಗೆ ಮೊದಲಿನಿಂದಲೂ ಮಕ್ಕಳೆಂದೆರೆ ತುಂಬಾನೇ ಇಷ್ಟ. ನಾನು ಕೂಡ ತಂದೆಯಾಗಬೇಕು ಎಂದು ಬಹುದಿನಗಳಿಂದ ಬಯಸಿದ್ದೆ. ನಾವು ಕೆಲ ದಿನಗಳ ಹಿಂದಷ್ಟೇ ಗೋಲ್ಡನ್​ ರಿಟ್ರೈವರ್​ ನಾಯಿಯನ್ನೂ ದತ್ತು ಪಡೆದಿದ್ದೆವು. ನಮ್ಮ ಮನೆಗೆ ಶೀಘ್ರದಲ್ಲಿಯೇ ಒಂದು ವಿಶೇಷ ಶಕ್ತಿ ಆಗಮಿಸಲಿದೆ ಎಂದು ಆದಿತ್ಯ ನಾರಾಯಣ್​ ಹೇಳಿದ್ದಾರೆ.
ಆದಿತ್ಯ ನಾರಾಯಣ್​ ಹಾಗೂ ಶ್ವೇತಾ ಅಗರ್​ವಾಲ್​ ಮುಂಬೈನಲ್ಲಿ 2020ರ ಡಿಸೆಂಬರ್​ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

https://www.instagram.com/p/CZGclahvlT4/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...