alex Certify ನಟಿ ತಾರಾ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್: ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ತಾರಾ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್: ದೂರು ದಾಖಲು

ಬೆಂಗಳೂರು: ಖ್ಯಾತ ನಟಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್ ಹಾಕಲಾಗಿದೆ.

ಈ ಕುರಿತಾಗಿ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾರಾ ಅವರ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

ಫೇಸ್ಬುಕ್ ನಲ್ಲಿ ತಾರಾ ಅನುರಾಧ ಮತ್ತು ತಾರಾ ಅನುರಾಧ ವೇಣು ಹೆಸರಿನ ಎರಡು ಅಧಿಕೃತ ಖಾತೆಗಳಿದ್ದು, ತಾರಾ ಅನುರಾಧ ವೇಣು ಹೆಸರಿನ ಖಾತೆಯನ್ನು ಅವರು ಹೆಚ್ಚಾಗಿ ಬಳಸುತ್ತಿದ್ದಾರೆ. ತಾರಾ ಅನುರಾಧ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಬಂದ ಬಗ್ಗೆ ಪರಿಚಿತರೊಬ್ಬರು ತಿಳಿಸಿದ್ದಾರೆ. ತಮಗೆ ಸಂಬಂಧವಿಲ್ಲದ ಪೋಸ್ಟ್ ಹಾಕಲಾಗಿದೆ. ಅಪರಿಚಿತರು ಖಾತೆ ಹ್ಯಾಕ್ ಮಾಡಿ ಪೋಸ್ಟ್ ಹಾಕಿದ್ದು, ಇದನ್ನು ಡಿಲೀಟ್ ಮಾಡಿಸಿ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...