alex Certify ಹಿರಿಯ ನಟ ಅಶ್ವತ್ಥನಾರಾಯಣ ನಿಧನ, ಶಿವಣ್ಣ ಸಂತಾಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಟ ಅಶ್ವತ್ಥನಾರಾಯಣ ನಿಧನ, ಶಿವಣ್ಣ ಸಂತಾಪ

ಬೆಂಗಳೂರು: ಹಿರಿಯ ನಟ ಅಶ್ವತ್ಥನಾರಾಯಣ(82) ಭಾನುವಾರ ನಿಧನರಾಗಿದ್ದಾರೆ. 350 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅಶ್ವತ್ಥನಾರಾಯಣ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚಿಗೆ ಪತ್ನಿ, ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವಾರು ಹಿರಿಯ, ಕಿರಿಯ ಕಲಾವಿದರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ.

ಅವರ ನಿಧನಕ್ಕೆ ನಟ ಶಿವರಾಜಕುಮಾರ್ ಸಂತಾಪ ಸೂಚಿಸಿದ್ದಾರೆ. ನಮ್ಮ ದೊಡ್ಡ ಕುಟುಂಬದ ಭಾಗವಾಗಿದ್ದ ಹಿರಿಯ ನಟ ಅಶ್ವತ್ಥನಾರಾಯಣ ನಿಧನಕ್ಕೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...