alex Certify BIG NEWS: ಮಾರಕ ಕೊರೋನಾಗೆ ಖ್ಯಾತ ನಟಿ, ನಿರೂಪಕಿ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾರಕ ಕೊರೋನಾಗೆ ಖ್ಯಾತ ನಟಿ, ನಿರೂಪಕಿ ಬಲಿ

ನವದೆಹಲಿ: ಕೊರೋನಾ ಸೋಂಕಿನಿಂದ ಖ್ಯಾತ ನಟಿ ಹಾಗೂ ನಿರೂಪಕಿ ಕನುಪ್ರಿಯಾ ಮೃತಪಟ್ಟಿದ್ದಾರೆ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದ ಕನುಪ್ರಿಯಾ ಅವರಿಗೆ ಕೊರೊನಾ ಸೋಂಕು ತಗುಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

80 ಧಾರಾವಾಹಿ ಮತ್ತು 50 ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಬ್ರಹ್ಮಕುಮಾರಿ ಬಿ.ಕೆ. ಶಿವಾನಿ ಟ್ವೀಟ್ ಮಾಡಿ ಕನುಪ್ರಿಯಾ ಮೃತಪಟ್ಟ ವಿಷಯವನ್ನು ಹಂಚಿಕೊಂಡಿದ್ದು ಸಂತಾಪ ಸೂಚಿಸಿದ್ದಾರೆ.

ದೂರದರ್ಶನದ ನಿರೂಪಕಿಯಾಗಿ ವೃತ್ತಿಜೀವನ ಪ್ರವೇಶಿಸಿದ ಕನುಪ್ರಿಯಾ ಧಾರಾವಾಹಿ, ಶೋಗಳಲ್ಲಿ ನಟಿಸಿದ್ದರು. ಬ್ರಹ್ಮಕುಮಾರಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಟಿವಿ ಕಾರ್ಯಕ್ರಮಗಳಾದ ಭನ್ವಾರ್, ಅನನ್ರೊ, ಕಹಿ ಏಕ್ ಗಾಂವ್, ಕರ್ತವ್ಯ, ಮೇರಿ ಕಹಾನಿ, ಟೆಸು ಕೆ ಫೂಲ್ ಮತ್ತು ತುಮ್ಹರಾ ಇಂತಜಾರ್ ಹೈ ಮತ್ತು ಟೆಲಿಫಿಲ್ಮ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...