alex Certify ಆಮೀರ್​ – ಕಿರಣ್​ ವಿಚ್ಛೇದನದ ಬಳಿಕ ವಿಚಿತ್ರ ಪೋಸ್ಟ್​ ಶೇರ್​ ಮಾಡಿದ ಅವಂತಿಕಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮೀರ್​ – ಕಿರಣ್​ ವಿಚ್ಛೇದನದ ಬಳಿಕ ವಿಚಿತ್ರ ಪೋಸ್ಟ್​ ಶೇರ್​ ಮಾಡಿದ ಅವಂತಿಕಾ…!

ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ದಂಪತಿಯ ವಿಚ್ಛೇದನ ವಿಚಾರ ಅಭಿಮಾನಿ ಬಳಗಕ್ಕೆ ದೊಡ್ಡ ಶಾಕ್​ ನ್ನೇ ನೀಡಿದೆ. ಸುದೀರ್ಘ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಬಗ್ಗೆ ಈ ದಂಪತಿ ಶನಿವಾರ ಅಧಿಕೃತ ಮಾಹಿತಿ ನೀಡಿತ್ತು. ಜಂಟಿ ಹೇಳಿಕೆ ನೀಡಿದ್ದ ಕಿರಣ್​ ಹಾಗೂ ಆಮೀರ್​ ಖಾನ್​ ಇದು ನಮ್ಮ ಜೀವನದ ಕೊನೆಯಲ್ಲ. ಬದಲಾಗಿ ಹೊಸ ಪಾಠವೊಂದು ಶುರುವಾಗುತ್ತಿರುವುದರ ಮುನ್ನುಡಿ ಎಂದು ಹೇಳಿಕೊಂಡಿತ್ತು.

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ

ವಿಚ್ಛೇದನದ ವಾರ್ತೆ ಹೊರಬೀಳುತ್ತಿದ್ದಂತೆಯೇಆಮೀರ್​​ ಖಾನ್ ಅಳಿಯ ನಟ ಇಮ್ರಾನ್​ ಖಾನ್​​ರಿಂದ ಬೇರ್ಪಟ್ಟ ಪತ್ನಿ ಆವಂತಿಕಾ ಮಲ್ಲಿಕ್​ ರಹಸ್ಯವಾದ ಪೋಸ್ಟ್​ ಒಂದನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಜೆಫ್‌ ಬೆಜೋಸ್ ಅಮೆಜಾನ್​ ಸಿಇಓ ಸ್ಥಾನ ತೊರೆಯಲು ಕ್ಷಣಗಣನೆ

ಈ ವರ್ಷವು ನನಗೆ ಏನಾದರೂ ಪಾಠ ಕಲಿಸಿದೆ ಎಂದರೆ ಅದು ಹೀಗಿದೆ : ನೀವು ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ. ಎಂದಿಗೂ ಇಲ್ಲ. ಒಂದೇ ದಾರಿ – ಜುನೋ ಡಯಾಜ್​ ಎಂದು ಬರೆಯಲಾದ ಟಿಪ್ಪಣಿಯನ್ನ ಅವಂತಿಕಾ ಶೇರ್​ ಮಾಡಿದ್ದಾರೆ.

ನಟ ಇಮ್ರಾನ್​ ಖಾನ್​ ಹಾಗೂ ಅವಂತಿಕಾ ಕಳೆದ 2 ವರ್ಷಗಳಿಂದ ಪ್ರತ್ಯೇಕ ಜೀವನ ನಡೆಸುತ್ತಿದ್ದಾರೆ. ಇಮ್ರಾನ್​ ನಟನೆಯನ್ನ ತ್ಯಜಿಸಿದ್ದಾರೆ ಎಂಬ ಮಾಹಿತಿಯನ್ನ ಅವರ ಸ್ನೇಹಿತರಾದ ಅಕ್ಷಯ್​ ಓಬೇರಾಯ್​ ಹಾಗೂ ಅಭಿನಯ್​ ಡಿಯೋ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...