alex Certify BIG NEWS: 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಆಮೀರ್​ ಖಾನ್​ ಹಾಗೂ ಕಿರಣ್ ರಾವ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಆಮೀರ್​ ಖಾನ್​ ಹಾಗೂ ಕಿರಣ್ ರಾವ್​​..!

ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಅವರ ಪತ್ನಿ ಕಿರಣ್​ ರಾವ್​​ ಬರೋಬ್ಬರಿ 15 ವರ್ಷದ ಸುದೀರ್ಘ ದಾಂಪತ್ಯವನ್ನ ಕೊನೆಗೊಳಿಸಿದ್ದಾರೆ. ಜಂಟಿ ಹೇಳಿಕೆಯ ಮೂಲಕ ಈ ದಂಪತಿ ಇಂದು ತಮ್ಮ ವಿವಾಹ ವಿಚ್ಛೇದನದ ವಿಚಾರವನ್ನ ಬಹಿರಂಗಪಡಿಸಿದೆ.

ಈ 15 ಸುಂದರ ವಸಂತದಲ್ಲಿ ನಾವು ಜೀವನಕ್ಕೆ ಸಾಕಾಗುವಷ್ಟು ಅನುಭವ, ಸಂತಸ ಹಾಗೂ ನಗುವನ್ನ ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಹಾಗೂ ಪ್ರೀತಿಯ ನೆಲೆಗಟ್ಟಿನಲ್ಲಿ ಬೆಳೆದಿದೆ. ಆದರೆ ಇದೀಗ ನಾವು ನಮ್ಮ ಜೀವನದ ಹೊಸ ಅಧ್ಯಾಯವನ್ನ ತೆರೆಯಲು ಹೊರಟಿದ್ದೇವೆ. ನಾವು ಇನ್ಮೇಲೆ ಪತಿ – ಪತ್ನಿಯಲ್ಲ. ಆದರೆ ಪೋಷಕರಾಗಿ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.

ಕೆಲ ಸಮಯದ ಹಿಂದಷ್ಟೇ ನಾವು ಬೇರಾಗುವ ಬಗ್ಗೆ ಚಿಂತನೆ ನಡೆಸಿದೆವು. ಇದೀಗ ಈ ಒಪ್ಪಂದವನ್ನ ಅಧಿಕೃತಗೊಳಿಸಿದ್ದೇವೆ. ನಾವು ಇನ್ಮೇಲೆ ಪ್ರತ್ಯೇಕವಾಗಿ ವಾಸಿಸಲಿದ್ದೇವೆ. ಆದರೆ ನಮ್ಮ ಪುತ್ರ ಆಜಾದ್​ಗೆ ನಾವು ಪೋಷಕರಾಗಿ ಇರುತ್ತೇವೆ. ಅಲ್ಲದೇ ಸಿನಿಮಾ ಸೇರಿದಂತೆ ವಿವಿಧ ಪ್ರಾಜೆಕ್ಟ್​ಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ನಮ್ಮ ಸಂಬಂಧ ಬೇರಾಗುತ್ತಿರುವುದನ್ನ ಬೆಂಬಲಿಸಿದ ನಮ್ಮ ಕುಟುಂಬಸ್ಥರು, ಸ್ನೇಹಿತರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆ ಹಾಗೂ ಆರ್ಶೀವಾದ ನಮ್ಮ ಮೇಲೆ ಸದಾ ಇರಲಿ. ಈ ವಿಚ್ಚೇದನವು ಯಾವುದರ ಅಂತ್ಯವಲ್ಲ ಆದರೆ ಹೊಸ ಪ್ರಯಾಣದ ಮುನ್ನುಡಿಯಾಗಿದೆ ಎಂದು ಬರೆಯಲಾಗಿದೆ.

— ANI (@ANI) July 3, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...