alex Certify BIG NEWS: ಫಿಲ್ಮ್ ಫೇರ್ ಅವಾರ್ಡ್ ಪ್ರಕಟ, ಅಮಿತಾಬ್ ಬಚ್ಚನ್ ಅಭಿನಯದ ‘ಗುಲಾಬೊ ಸಿತಾಬೋ’ಗೆ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫಿಲ್ಮ್ ಫೇರ್ ಅವಾರ್ಡ್ ಪ್ರಕಟ, ಅಮಿತಾಬ್ ಬಚ್ಚನ್ ಅಭಿನಯದ ‘ಗುಲಾಬೊ ಸಿತಾಬೋ’ಗೆ ಪ್ರಶಸ್ತಿ

ಬಾಲಿವುಡ್ ಚಿತ್ರರಂಗದ ಅತಿದೊಡ್ಡ ಮತ್ತು ವರ್ಣರಂಜಿತ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದ್ದು, 66ನೇ ವಿಮಲ್ ಎಲೈಚಿ ಫಿಲಂ ಫೇರ್ ಪ್ರಶಸ್ತಿ ‘ಗುಲಾಬೋ ಸಿತಾಬೋ’ ಚಿತ್ರಕ್ಕೆ ಲಭಿಸಿದೆ.

ಅತ್ಯುತ್ತಮ ಸಂಭಾಷಣೆಗಾಗಿ ‘ಗುಲಾಬೋ ಸಿತಾಬೋ’ ಚಿತ್ರಕ್ಕೆ ಪ್ರಶಸ್ತಿ ನೀಡಲಾಗಿದೆ. ಜೂಹಿ ಚತುರ್ವೇದಿ ಅತ್ಯುತ್ತಮ ಸಂಭಾಷಣೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೆಸ್ಟ್ ಪ್ಲೇಬ್ಯಾಕ್ ಗಾಯಕ ಪ್ರಶಸ್ತಿಯನ್ನು ‘ಏಕ್ ತುಕ್ಡಾ ಧೂಪ್’ ಚಿತ್ರಕ್ಕೆ ರಾಘವ್ ಚೈತನ್ಯ ಪಡೆದುಕೊಂಡಿದ್ದು, ಅಸೀಸ್ ಕೌರ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನು ‘ಮಲಾಂಗ್’ ಚಿತ್ರದ ಶೀರ್ಷಿಕೆ ಗೀತೆಗಾಗಿ ಪಡೆದುಕೊಂಡಿದ್ದಾರೆ.

‘ಲೂಡೋ’ ಚಿತ್ರಕ್ಕಾಗಿ ಪ್ರೀತಮ್ ಅತ್ಯುತ್ತಮ ಸಂಗೀತ ಪ್ರಶಸ್ತಿ, ಕಾಜೋಲ್ ಅಭಿನಯದ ‘ದೇವಿ’ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿಯನ್ನು ‘ಗುಲಾಬೋ ಸಿತಾಬೋ’ ಚಿತ್ರಕ್ಕಾಗಿ ವೀರ್ ಕಪೂರ್ ಪಡೆದುಕೊಂಡಿದ್ದಾರೆ. ಬೆಸ್ಟ್ ಎಡಿಟಿಂಗ್ ಪ್ರಶಸ್ತಿಯನ್ನು ಯಶ ಪುಷ್ಪಾ ರಾಮ್ ಚಂದಾನಿ ಪಡೆದುಕೊಂಡಿದ್ದಾರೆ. ‘ದಿಲ್ ಬೇಚಾರ’ ಚಿತ್ರಕ್ಕಾಗಿ ಫರ್ಹಾಖಾನ್ ಬೆಸ್ಟ್ ಕೊರಿಯೋಗ್ರಾಪರ್ ಪ್ರಶಸ್ತಿ ಪಡೆದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...