alex Certify 6 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಟ್ರೈಲರ್

ನಿನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ರಾಬರ್ಟ್’ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದರು. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಅತಿಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿತ್ತು. ಇದೀಗ ಈ ಟ್ರೈಲರ್ 6 ಮಿಲಿಯನ್ ಗೂ ಅಧಿಕ ವೀಕ್ಷಣೆ 364k ಲೈಕ್ಸ್ ಹಾಗೂ 51ಸಾವಿರ ಕಮೆಂಟ್ಸ್ ಗಳನ್ನು ಪಡೆದು ಮುನ್ನುಗ್ಗುತ್ತಲೇ ಇದೆ.

ವರನಟ ಡಾ.ರಾಜ್ ಕುಮಾರ್ ಪ್ರತಿಮೆ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಹ್ಯಾರಿಸ್

ಈ ಟ್ರೈಲರ್ ನಲ್ಲಿ ದರ್ಶನ್ ಹೇಳಿರುವ ಏ ತುಕಾಲಿ ನೀನು ಮಾಸ್ ಆದ್ರೆ ನಾನು ಆ ಮಾಸ್ ಗೆ ಬಾಸ್ ಎಂಬ ಡೈಲಾಗ್ ವೊಂದು ಸಾಕಷ್ಟು ಸೌಂಡ್ ಮಾಡುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಟಾಲಿವುಡ್ ನ ಖ್ಯಾತ ನಟ ಜಗಪತಿ ಬಾಬು ಖಳನಾಯಕನಾಗಿ ಅಭಿನಯಿಸಿದ್ದು, ನಟ ವಿನೋದ್ ಪ್ರಭಾಕರ್ ಸೇರಿದಂತೆ ರವಿಶಂಕರ್ ಹಾಗೂ ಹಿರಿಯ ನಟ ದೇವರಾಜ್ ಕೂಡ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...