alex Certify 200 ಕೋಟಿ ರೂ. ಕ್ಲಬ್​ ಸೇರಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ‘ದಿ ಕಾಶ್ಮೀರ ಫೈಲ್ಸ್​​’..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ಕೋಟಿ ರೂ. ಕ್ಲಬ್​ ಸೇರಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ‘ದಿ ಕಾಶ್ಮೀರ ಫೈಲ್ಸ್​​’..!

ಬಾಲಿವುಡ್​ನಲ್ಲಿ ತೆರೆ ಕಂಡ ದಿ ಕಾಶ್ಮೀರ್​ ಫೈಲ್ಸ್​​​ ಸಿನಿಮಾವು ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮಾರ್ಚ್​ 18ರಂದು ಬಾಕ್ಸಾಫೀಸಿನಲ್ಲಿ 100 ಕೋಟಿ ರೂಪಾಯಿಗಳನ್ನು ಗಳಿಸಿದ್ದ ಈ ಸಿನಿಮಾವು ಇದೀಗ 200 ಕೋಟಿ ರೂ.ಗಳ ಕ್ಲಬ್​ ಸೇರುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದೆ…!
ಸಾಕಷ್ಟು ಅಡೆತಡೆಗಳ ನಡುವೆಯೂ ಈ ಸಿನೆಮಾವು ಮಾರ್ಚ್​ 11ರಂದು ದೇಶಾದ್ಯಂತ ರಿಲೀಸ್​ ಆಗಿತ್ತು , ಈ ಸಿನಿಮಾವು 1990ರ ದಶಕದಲ್ಲಿ ಕಾಶ್ಮೀರ ದಂಗೆಯ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ ಅನುಪಮ್​ ಖೇರ್​, ದರ್ಶನ್​ ಕುಮಾರ್​, ಮಿಥುನ್​ ಚಕ್ರವರ್ತಿ ಹಾಗೂ ಪಲ್ಲವಿ ಜೋಶಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾವು ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡಿದೆ. ಸಿನಿಮಾ ತೆರೆಕಂಡ ಒಂದೇ ವಾರದಲ್ಲಿ 100 ಕೋಟಿ ಕ್ಲಬ್​ ಸೇರಿದ್ದ ಈ ಸಿನಿಮಾ ಇದೀಗ 200 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕ 200 ಕೋಟಿ ರೂಪಾಯಿ ಕ್ಲಬ್​ ಸೇರಿದ ದೇಶದ ಮೊದಲ ಸಿನಿಮಾ ಇದಾಗಿದೆ.

ದಿ ಕಾಶ್ಮೀರ ಫೈಲ್ಸ್​ ಸಿನಿಮಾವು 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ಅವರು ಅನುಭವಿಸಿದ ನೋವು ಸೇರಿದಂತೆ ಹೃದಯ ವಿದ್ರಾವಕ ಘಟನೆಯನ್ನು ಆಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...