alex Certify ಹೊಸ ವರ್ಷಕ್ಕೆ ಮೋಹಕ ತಾರೆ ರಮ್ಯಾ ಮಾಡಿದ ಸಂಕಲ್ಪವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಮೋಹಕ ತಾರೆ ರಮ್ಯಾ ಮಾಡಿದ ಸಂಕಲ್ಪವೇನು ಗೊತ್ತಾ…?

ಬೆಂಗಳೂರು: ಹೊಸ ವರ್ಷಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಹೊಸ ವರ್ಷದಲ್ಲಿ ಹೊಸ ಸಂಕಲ್ಪದ ಜೊತೆಗೆ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಹಲವರಿಗೆ ಇದೊಂದು ಒಳ್ಳೆಯ ಸಂದರ್ಭ. ಅಂತೆಯೇ ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಹೊಸ ವರ್ಷದಲ್ಲಿ ಇಂಥದ್ದೊಂದು ಹೊಸ ನಿರ್ಧಾರ ಮಾಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ರಮ್ಯಾ, ಇದೀಗ 2021ರ ಹೊಸ ವರ್ಷದಲ್ಲಿ ತಾವು ಹೊಸ ಸಂಕಲ್ಪ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

2021ರ ಈ ಸಂದರ್ಭದಲ್ಲಿ ತಾವು ಮಾಂಸಾಹಾರವನ್ನು ತ್ಯಜಿಸುತ್ತಿದ್ದು, ಇನ್ನುಮುಂದೆ ನಾನು ಸಸ್ಯಾಹಾರಿಯಾಗಲಿದ್ದೇನೆ. ಮಾಂಸಾಹಾರ ಮಾಂಸಖಂಡಗಳಿಗೆ ಶಕ್ತಿ ನೀಡುತ್ತೆ ಎಂಬುದು ಹಲವರ ವಾಡಿಕೆ. ಆದರೆ ನನಗೆ ಇದರಲ್ಲಿ ನಂಬಿಕೆಯಿಲ್ಲ. ಹಾಗಾಗಿ ನಾನು ಹೊಸ ವರ್ಷದಲ್ಲಿ ಹೊಸ ಸಂಕಲ್ಪವಾಗಿ ಮಾಂಸಾಹಾರ ತ್ಯಜಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...