alex Certify ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…!

ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ ಅವರ ಕನಸಿನ ಮನೆ ಮಾರಾಟ ಮಾಡಲು ಈ ಹಿಂದೆ ಅವರ ತಂದೆ ನಿರ್ಧಾರ ಮಾಡಿದ್ದರು. ಆದರೆ ಇದೀಗ ಮಗಳು ಓಡಾಡುತ್ತಿದ್ದ ಕಾರುಗಳನ್ನು ಮಾರಾಟ ಮಾಡೋದಿಕ್ಕೆ ರಾಗಿಣಿ ತಂದೆ ಮುಂದಾಗಿದ್ದಾರೆ.

ಯಲಹಂಕದ ಜ್ಯುಡಿಶಿಯಲ್ ಲೇಔಟ್‌ನಲ್ಲಿರುವ ಅವರ ಮನೆಯನ್ನು ಖಾಸಗಿ ವೆಬ್ ಸೈಟ್‌ನಲ್ಲಿ ಸೇಲ್‌ಗೆ ಇಡಲಾಗಿದೆ. ಆದರೆ ಈ ಮನೆಯನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಕಾರುಗಳನ್ನಾದರೂ ಮಾರಾಟ ಮಾಡಿದರೆ ಹಣ ಸಿಗಬಹುದು ಎಂಬ ಕಾರಣಕ್ಕೆ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ರಾಗಿಣಿ ಬಳಸುತ್ತಿದ್ದ ಇನ್ನೋವಾ ಕಾರು ಹಾಗೂ ಮಾರುತಿ ಸುಝುಕಿಯ sx4 ಕಾರನ್ನು ಮಾರಾಟ ಮಾಡೋದಿಕ್ಕೆ ಮುಂದಾಗಿದ್ದಾರೆ. ಇನೋವಾವನ್ನು 9 ಲಕ್ಷಕ್ಕೆ ಹಾಗು ಮಾರುತಿ ಸುಝಕಿಯನ್ನು 3ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಗಳ ಕಾನೂನಾತ್ಮಕ ಹೋರಾಟಕ್ಕೆ ಹಣ ಬೇಕಾಗಿರೋದ್ರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ರಾಗಿಣಿ ಪೋಷಕರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...