alex Certify ವಿರೋಧದ ಕಾರಣಕ್ಕೆ ಬದಲಾಯ್ತು ರಚಿತಾರಾಮ್ ಸಿನಿಮಾ ಟೈಟಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರೋಧದ ಕಾರಣಕ್ಕೆ ಬದಲಾಯ್ತು ರಚಿತಾರಾಮ್ ಸಿನಿಮಾ ಟೈಟಲ್

ರಾಜ್‌ಕುಮಾರ್ ನಟನೆಯ ʼಕಸ್ತೂರಿ ನಿವಾಸʼ ಸಿನಿಮಾ ಯಾರಿಗೆ ಗೊತ್ತಿಲ್ಲ. ಈ ಸಿನಿಮಾ ನೋಡಿ ಅದೆಷ್ಟೋ ಮಂದಿ ಬದಲಾಗಿದ್ದಾರೆ. ಇದೀಗ ಈ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದರು ನಿರ್ದೇಶಕ ದಿನೇಶ್ ಬಾಬು. ಆದರೆ ಈ ಟೈಟಲ್ ಇಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗಿದೆ.

ಹೌದು, ರಚಿತಾ ರಾಮ್ ಹಾಗೂ ಸ್ಕಂದ ಅಶೋಕ್ ನಟನೆಯ ಸಿನಿಮಾಗೆ ಕಸ್ತೂರಿ ನಿವಾಸ ಎಂದು ಟೈಟಲ್ ಫಿಕ್ಸ್ ಮಾಡಿ, ಚಿತ್ರದ ಮುಹೂರ್ತ ನೆರವೇರಿಸಲಾಗಿತ್ತು. ಆದರೆ ರಾಜ್‌ಕುಮಾರ್ ಅಭಿಮಾನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿನಿಮಾ ಟೈಟಲ್ ಬದಲಾವಣೆ ಮಾಡಲಾಗಿದೆ.

ಕಸ್ತೂರಿ ನಿವಾಸ ಟೈಟಲ್ ಬದಲು ಕಸ್ತೂರಿ ಮಹಲ್ ಎಂದು ಹೆಸರಿಡಲಾಗಿದೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿದೆ ಈ ಸಿನಿಮಾ. ಇನ್ನು ಈ ಸಿನಿಮಾಗೆ ರವೀಶ್ ಆರ್.ಸಿ. ಬಂಡವಾಳ ಹೂಡಿದ್ದಾರೆ. ಇದು ದಿನೇಶ್ ಬಾಬು ಅವರ 50ನೇ ಚಿತ್ರವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...