alex Certify ‘ರಾಬರ್ಟ್’ ಸಿನಿಮಾ ಕುರಿತು‌ ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಬರ್ಟ್’ ಸಿನಿಮಾ ಕುರಿತು‌ ಇಲ್ಲಿದೆ ಒಂದಷ್ಟು ಮಾಹಿತಿ

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಶಿವರಾತ್ರಿಯಂದು ಬಿಡುಗಡೆ ಮಾಡಿದ್ದರು. ಈ ಚಿತ್ರ ಎಲ್ಲೆಲ್ಲೂ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ತರುಣ್ ಸುಧೀರ್ ನಿರ್ದೇಶನಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಈ ಚಿತ್ರದ ಆರಂಭದಲ್ಲಿ ದರ್ಶನ್ ಹನುಮಂತನ ವೇಷದಲ್ಲಿ ಎಂಟ್ರಿ ಕೊಡುತ್ತಾರೆ. ಫಸ್ಟ್ ಹಾಫ್ ನಲ್ಲಿ ರಾಘವ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು‌, ತೊದಲು ಮಾತನಾಡುತ್ತಿರುತ್ತಾರೆ. ಇದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಈ ಸಿನಿಮಾದಲ್ಲಿ ದರ್ಶನ್ ಅವರ ನಿಜವಾದ ಹೆಸರು ರಾಬರ್ಟ್. ತಮ್ಮ ಸ್ನೇಹಿತ ರಾಘವನ ಮಗನನ್ನು ರಕ್ಷಿಸಲು ಹೆಸರನ್ನು ಬದಲಿಸಿಕೊಂಡಿರುತ್ತಾರೆ.

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಈಶಾ ಗುಪ್ತಾ

ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ಅಭಿನಯಿಸಿದ್ದು, ದರ್ಶನ್ ರಾಬರ್ಟ್ ಎಂಬ ದೊಡ್ಡ ಡಾನ್ ಆಗಿರುತ್ತಾರೆ. ವಿನೋದ್ ಪ್ರಭಾಕರ್, ಅವರ ಸ್ನೇಹಿತನಾಗಿ ಸಾಥ್ ನೀಡಿದ್ದಾರೆ. ದರ್ಶನ್ ಅವರ ಮಾಸ್ ಲುಕ್ ಹಾಗೂ ಡೈಲಾಗ್ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿದೆ. ಶಿವರಾಜ್ ಕೆ.ಆರ್. ಪೇಟೆ ಈ ಸಿನಿಮಾದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ ಅವರ ಕಾಮಿಡಿ ಈ ಚಿತ್ರದಲ್ಲಿದ್ದು, ಜಗಪತಿ ಬಾಬು ಹಾಗೂ ರವಿಕಿಶನ್, ರವಿಶಂಕರ್ ವಿಲನ್ ಗಳಾಗಿ ನಟಿಸಿದ್ದಾರೆ. ‘ರಾಬರ್ಟ್’ ಎರಡನೇ ಭಾಗ ಮಾಡಿ ಎಂದು ತರುಣ್ ಸುಧೀರ್ ಅವರಿಗೆ ಈಗಾಗಲೇ ದರ್ಶನ್ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...