alex Certify ಈ ವಿಷ್ಯದಲ್ಲಿ ಪತ್ನಿ ಮುಂದೆ ಸೋತ ವಿರಾಟ್ ಕೊಹ್ಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಷ್ಯದಲ್ಲಿ ಪತ್ನಿ ಮುಂದೆ ಸೋತ ವಿರಾಟ್ ಕೊಹ್ಲಿ..!

ಟೀಂ ಇಂಡಿಯಾ ನಾಐಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜೋಡಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಪ್ರತಿಯೊಬ್ಬರು ಅವ್ರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರ್ತಾರೆ. ಈಗ ಅವ್ರ ಬಗ್ಗೆ ಸಾಕಷ್ಟು ತಿಳಿಯುವ ಅವಕಾಶ ಸಿಕ್ಕಿದೆ. ಟೇಕ್ ಅ ಬ್ರೇಕ್ ಕಾರ್ಯಕ್ರಮದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು.

ನಂಬಿಕೆ, ಸಮರ್ಪಣೆ, ಪಾರದರ್ಶಕತೆ ಮತ್ತು ಸಾಮರಸ್ಯದ ಜೋಡಿ ಈ ಸಂದರ್ಭದಲ್ಲಿ ಒಂದು ಆಟವನ್ನು ಆಡಿದರು.ಆಟದ ಆರಂಭದಲ್ಲಿ ಅನುಷ್ಕಾ ಶರ್ಮಾ,ವಿರಾಟ್ ಕೊಹ್ಲಿಗೆ ಪ್ರಶ್ನೆ ಕೇಳಿದ್ದರು. ನಂತ್ರ ಕೊಹ್ಲಿಗೆ ಅವಕಾಶ ಸಿಕ್ಕಿತ್ತು.  ಈ  ಪ್ರಶ್ನೋತ್ತರದಲ್ಲಿ ಇಬ್ಬರೂ ತಮ್ಮದೇ ಆದ ಉತ್ತರ ನೀಡಿ ಅಭಿಮಾನಿಗಳನ್ನು ರಂಜಿಸಿದ್ರು.

ವಿರಾಟ್ ಕೊಹ್ಲಿಗೆ ಪರ್ವತಗಳು ಇಷ್ಟ ಎಂಬುದು ಇದ್ರಿಂದ ಬಹಿರಂಗವಾಗಿದೆ. ಹಾಗೆ ಅನುಷ್ಕಾ ತಾಯಿ ಬಗ್ಗೆ ಕೊಹ್ಲಿಗೆ ಯಾವ ವಿಷ್ಯ ಗೊತ್ತಿರಲಿಲ್ಲ ಎಂಬುದು ವಿಡಿಯೋದಲ್ಲಿದೆ.ಫೋಟೋಗ್ರಾಫಿಯಲ್ಲಿ ಹಿಂದಿರುವ ಕೊಹ್ಲಿ,ಸಿನಿಮಾ ನೋಡ್ತಾ ನೋಡ್ತಾ ಅಲ್ಲೆ ನಿದ್ರೆ ಮಾಡ್ತಾರಂತೆ.ಈ ವಿಡಿಯೋ ಇನ್ಸ್ಟ್ರಾಗ್ರಾಮ್ ನಲ್ಲಿ ಕೊಹ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಕೇಳುವ ಮೂರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ತಪ್ಪುತ್ತರ ನೀಡುವ ಕೊಹ್ಲಿ ರೌಂಡ್ ನಲ್ಲಿ ಸೋಲ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...