alex Certify ಇಲ್ಲಿದೆ ನಟಿ ಸಾರಾ ಸೌಂದರ್ಯದ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನಟಿ ಸಾರಾ ಸೌಂದರ್ಯದ ರಹಸ್ಯ

ಸಾರಾ ಆಲಿ ಖಾನ್ ಬಾಲಿವುಡ್ ನ ಖ್ಯಾತ ನಟಿ. ಇತ್ತೀಚೆಗಷ್ಟೇ ಅವರು ತಮ್ಮ ಬ್ಯೂಟಿ ಸೀಕ್ರೇಟ್ ಅನ್ನು ರಿವೀಲ್ ಮಾಡಿದ್ದಾರೆ.
ಎಷ್ಟೇ ಕೆಲಸವಿದ್ದರೂ ಮರೆಯದೆ ವ್ಯಾಯಾಮ ಮಾಡಬೇಕು ಎಂಬುದು ಅವರ ಮೊದಲ ಸಲಹೆ.

ಶೂಟಿಂಗ್ ಅಥವಾ ಇತರ ಯಾವುದೇ ಉದ್ದೇಶಗಳ ಕಾರಣಕ್ಕೆ ವ್ಯಾಯಾಮ ಮಾತ್ರ ಮಿಸ್ ಮಾಡಬೇಡಿ. ವ್ಯಾಯಾಮದಿಂದ ದೇಹ ಬೆವರುವ ಮೂಲಕ ವಿಷಕಾರಿ ಅಂಶಗಳೆಲ್ಲಾ ಹೊರಬರುತ್ತವೆ. ಇದು ಧೂಳು ಮತ್ತು ಕೊಳೆಯನ್ನು ತ್ಚಚೆಯಿಂದ ಬೇರ್ಪಡಿಸುತ್ತದೆ ಎನ್ನುತ್ತಾರವರು.

ಆರೋಗ್ಯಕರವಾದ ಆಹಾರಗಳನ್ನು ಸೇವಿಸಬೇಕು. ಸಿಹಿ, ಖಾರ ಐಸ್ಕ್ರೀಮ್ ಗಳಿಂದ ದೂರವಿರಬೇಕು ಎಂದಲ್ಲ. ಇತಿಮಿತಿಯಲ್ಲಿ ಸೇವಿಸುವುದನ್ನು ಕಲಿಯಬೇಕು. ಜಿಡ್ಡಿನಂಶ ಇರುವ ವಸ್ತುಗಳಿಂದ ಸಾಧ್ಯವಾದಷ್ಟು ದೂರವಿರಬೇಕು.

ಆಕರ್ಷಕವಾಗಿ ಕಾಣಿಸಿಕೊಳ್ಳುವುದರ ಗುಟ್ಟು ಆಕರ್ಷಕ ಉಡುಪುಗಳನ್ನು ಧರಿಸುವುದರಲ್ಲಿದೆ ಎಂಬುದನ್ನು ನಂಬಿದವರು ಸಾರಾ ಆಲಿ ಖಾನ್. ಹಗುರವಾದ, ಚರ್ಮದ ಭಾಗಕ್ಕೆ ಹೆಚ್ಚು ಗಾಳಿಯಾಡುವಂತೆ ಮಾಡುವ ಉಡುಪುಗಳನ್ನು ಧರಿಸಲು ಸಲಹೆ ಮಾಡುತ್ತಾರೆ.

ಚರ್ಮ ಒಣಗದಂತೆ ನೋಡಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ ಎಂದು ಹೇಳಲು ಅವರು ಮರೆಯುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...